ಪರಿಶಿಷ್ಟ ವರ್ಗಕ್ಕೆ ಸುಳ್ಳು ಭರವಸೆ ಸಲ್ಲ

ಮೊಳಕಾಲ್ಮೂರು: ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ಅನ್ಯಾಯ ಮಾಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಚಿಕ್ಕಬಳ್ಳಾಪುರ ವಾಲ್ಮೀಕಿ ಗುರುಪೀಠದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸದ್ಯ ರಾಜಕೀಯ ಪ್ರವೇಶಕ್ಕೆ ಶೇ.7.5, ಸಮುದಾಯದ ಅಭಿವೃದ್ಧಿಗೆ ಕೇವಲ 3ರಷ್ಟು ಮೀಸಲಾತಿ ಜಾರಿ ಇದೆ. ಇದರಡಿಯೇ ಮತ್ತೊಂದು ಸಮುದಾಯವನ್ನು ಸೇರಿಸುವುದು ಯಾವ ನ್ಯಾಯ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

1991ರಲ್ಲಿ ಏಳೆಂಟು ಲಕ್ಷ ಜನಸಂಖ್ಯೆ ಹೊಂದಿದ್ದ ಸಮುದಾಯ ಪ್ರಸ್ತುತ 80 ಲಕ್ಷಕ್ಕೆ ಏರಿಕೆಯಾಗಿದೆ. ಇದರಲ್ಲಿ 52 ಲಕ್ಷ ಬುಡಕಟ್ಟು, ಪರಿಶಿಷ್ಟ ಪಂಗಡದವರು ಇದ್ದಾರೆ ಎಂದು ತಿಳಿಸಿದರು.

ಸಮಾಜದ ಯುವ ಸಂಘಟಕರಾದ ಬಿ.ವಿಜಯ್, ನಾಗರಾಜ್, ಲಕ್ಷ್ಮಣ, ನಾಗೇಂದ್ರ, ಮಂಜುನಾಥ, ರವಿಚಂದ್ರ, ಗಂಗಾಧರ,ತಿಪ್ಪೇಸ್ವಾಮಿ, ಓಬಯ್ಯ ಮತ್ತಿತರರಿದ್ದರು.