ಶಾಂತ ಮನೋಭಾವ ಲಭ್ಯ

ಮೊಳಕಾಲ್ಮೂರು: ನಿಯಮಿತ ಯೋಗಾಭ್ಯಾಸದಿಂದ ಆರೋಗ್ಯ, ಸದೃಢ ದೇಹ ಹಾಗೂ ಶಾಂತ ಮನೋಭಾವ ಪಡೆಯಬಹುದು ಎಂದು ಮುಖ್ಯ ಶಿಕ್ಷಕ ಬಿ.ಸಿ.ಸಂತೋಷ್ ಅಭಿಪ್ರಾಯಪಟ್ಟರು.

ವಿಜಯವಾಣಿ, ದಿಗ್ವಿಜಯ ನ್ಯೂಸ್ ಹಾಗೂ ಸರ್ವೋದಯ ವಿದ್ಯಾ ಸಂಸ್ಥೆ ಸಹಭಾಗಿತ್ವದಲ್ಲಿ ಇಲ್ಲಿನ ಚೈತನ್ಯ ಪಭ್ಲಿಕ್ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಕಾಯಿಲೆ, ಮಾನಸಿಕ ಒತ್ತಡ ಕಡಿಮೆ ಮಾಡುವ ಶಕ್ತಿ ಯೋಗಕ್ಕಿದೆ. ನಿರಂತರ ಅಭ್ಯಾಸದಿಂದ ಧನಾತ್ಮಕ ಚಿಂತನೆ ಮೂಡುತ್ತದೆ. ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದು ಎಂದು ತಿಳಿಸಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ವನಿತಾ ಗಿರೀಶ್ ಮಾತನಾಡಿ, ಪ್ರಕೃತಿಯೊಂದಿಗೆ ಒಂದಾಗುವ ಯೋಗ ನಿಸರ್ಗವನ್ನು ಗೌರವದಿಂದ ಕಾಣುವ ಮನೋಭಾವ ಜಾಗೃತಗೊಳಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳಿಗೆ ಯೋಗಾಭ್ಯಾಸ ರೂಢಿಸಿದರೆ, ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ ಉತ್ತಮವಾಗುತ್ತದೆ. ಸಕಾರಾತ್ಮಕ ಚಿಂತನೆಗಳು ವೃದ್ಧಿಸುತ್ತವೆ. ಯೋಗದ ಬಗ್ಗೆ ಕಾಳಜಿ ವಹಿಸುತ್ತಿರುವ ವಿಜಯವಾಣಿ ಕಾರ್ಯ ಪ್ರಶಂಸಾರ್ಹ ಎಂದರು.

ಸಹ ಶಿಕ್ಷಕರಾದ ಅಶೋಕ್, ಸುರೇಶ್‌ಬಾಬು, ರಾಧಿಕಾ, ಅನಿತಾ,ಓಬಣ್ಣ, ಸುಮಯಬಾನು, ದೈಹಿಕ ಶಿಕ್ಷಕ ಶರಣಪ್ಪ ಇತರರಿದ್ದರು.

Leave a Reply

Your email address will not be published. Required fields are marked *