ಕೆರೆ ಕಟ್ಟೆ, ಚೆಕ್‌ಡ್ಯಾಮ್‌ಗಳಿಗೆ ಜೀವ ಕಳೆ

ಮೊಳಕಾಲ್ಮೂರು: ತಾಲೂಕಿನ ಹಲವೆಡೆ ಶುಕ್ರವಾರ ಮಧ್ಯರಾತ್ರಿ ಸುರಿದ ಮಳೆಗೆ ಐದಾರು ವರ್ಷಗಳಿಂದ ಬರಿದಾಗಿದ್ದ ಕೆರೆಕಟ್ಟೆಗಳಿಗೆ ಸ್ವಲ್ಪ ನೀರು ಬಂದಿದ್ದು ರೈತರಲ್ಲಿ ಉತ್ಸಾಹ ಮೂಡಿಸಿದೆ.

ಗುಡುಗು ಬಿರುಗಾಳಿ ಸಹಿತ ಮಳೆಗೆ ಮೊಳಕಾಲ್ಮೂರು ಸೇರಿ ತಾಲೂಕಿನ ರಾಯಾಪುರ, ತುಮಕೂರ‌್ಲಹಳ್ಳಿ, ಚಿಕ್ಕುಂತಿ, ಸಿದ್ದಯ್ಯನಕೋಟೆ ಮತ್ತಿತರೆಡೆ ಕೃಷಿಹೊಂಡ, ಚೆಕ್‌ಡ್ಯಾಮ್, ಗೋಕಟ್ಟೆಗಳು ತುಂಬಿದ್ದು, ಹಳ್ಳಗಳಲ್ಲಿ ನೀರು ಹರಿದಿದೆ. ಜೋರು ಮಳೆಗೆ ಕುಂಟೋಬಯ್ಯನಹಟ್ಟಿಯಲ್ಲಿ ನಾಲ್ಕು ಮನೆಗಳ ಗೋಡೆ ಕುಸಿದಿದ್ದು, ಯಾವುದೆ ಪ್ರಾಣಾಪಾಯವಾಗಿಲ್ಲ.

Leave a Reply

Your email address will not be published. Required fields are marked *