More

    ಕಾಮಗಾರಿ ವಿಳಂಬದಿಂದ ಜನ ಹೈರಾಣ

    ಮೊಳಕಾಲ್ಮೂರು: ಪಟ್ಟಣದ ಹೃದಯ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಕೆಳ ಸೇತುವೆ ಕಾಮಗಾರಿ ವಿಳಂಬವಾಗಿದ್ದು, ವಾಹನ ಚಾಲಕರು ಹೈರಾಣಾಗಿದ್ದಾರೆ.

    ಪಟ್ಟಣದಿಂದ ಕೋನಸಾಗರ, ಕೊಂಡ್ಲಹಳ್ಳಿ ಮಾರ್ಗವಾಗಿ ಹೆದ್ದಾರಿಗೆ ಸಂಪರ್ಕಿಸುವ ಮಾರ್ಗದಲ್ಲಿ ರೈಲ್ವೆ ಕೆಳ ಸೇತುವೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಮೂರು ತಿಂಗಳ ಹಿಂದೆ ಗುತ್ತಿಗೆದಾರರು ರಸ್ತೆ ಸಂಪರ್ಕ ಕಡಿತಗೊಳಿಸಿ ಕಾಮಗಾರಿ ಕೆಲಸ ಪ್ರಾರಂಭಿಸಿದ್ದರು. ಆದರೆ, ಈವರೆಗೂ ಕೆಲಸ ಪೂರ್ಣಗೊಳಿಸಿಲ್ಲ. ಇದರಿಂದ ಬಸ್, ಲಾರಿ, ಆಟೋ, ಬೈಕ್ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

    ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ಮಾಡಿಲ್ಲ. ಪರಿಣಾಮ ಅನ್ಯ ಮಾರ್ಗವಾಗಿ ಊರುಗಳನ್ನು ತಲುಪಬೇಕೆಂದರೆ ಐದಾರು ಕಿಮೀ ದೂರ ಪ್ರಯಾಸ ಪಟ್ಟು ಹೋಗುವ ಪರಿಸ್ಥಿತಿ ಇದೆ.

    ಕಿರಿದಾದ ರಸ್ತೆಗಳಲ್ಲಿ ಅಪಘಾತ ಸಂಭವಿಸಿವೆ. ಅನೇಕರು ಗಾಯಗೊಂಡಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಬುದು ಸ್ಥಳೀಯರ ಆಗ್ರಹ.

    ಗುಣಮಟ್ಟ ಕಾಯ್ದುಕೊಳ್ಳಬೇಕು: ಕಾಮಗಾರಿ ಬಹಳಷ್ಟು ಆಮೆಗತಿಯಲ್ಲಿ ಸಾಗುತ್ತಿದೆ. ಜತೆಗೆ ಗುಣಮಟ್ಟ ಕುರಿತು ಸಂಶಯ ಇದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು. ಗುಣಮಟ್ಟದ ಜತೆಗೆ ಕಾಮಗಾರಿ ಶೀಘ್ರ ಮುಗಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡರಾದ ಸೈಯದ್ ಗೌಸ್, ಏಜೆಂಟ್ ಬಕ್ಷಿ, ಕೃಷ್ಣಪ್ಪ, ಖಾಜಾ ಹುಸೇನ್, ಕಲೀಲ್ ಅಹಮದ್, ಬಡೋಬನಾಯಕ, ಷಫಿಉಲ್ಲಾ, ನಾಗರಾಜ, ಕಲೀಂ, ಸುರೇಶ, ಈರಣ್ಣ ಎಚ್ಚರಿಸಿದ್ದಾರೆ.

    ತಹಸೀಲ್ದಾರ್ ಎಂ.ಬಸವರಾಜ್ ಹೇಳಿಕೆ: ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ.

    ರೈಲ್ವೆ ಇಲಾಖೆ ಎಂಜಿನಿಯರ್ ಜಗದೀಶ್ ಹೇಳಿಕೆ: ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಪೂರೈಸಬೇಕೆಂಬ ಷರತ್ತಿನ ಅನ್ವಯ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts