ಪಪಂ ಜನಪ್ರತಿನಿಧಿಗಳ ಕೈಗಿಲ್ಲ ಅಧಿಕಾರ

ಮೊಳಕಾಲ್ಮೂರು: ಸ್ಥಳೀಯ ಸಂಸ್ಥೆಗೆ ಚುನಾವಣೆ ಮೂಲಕ ಸದಸ್ಯರು ಆಯ್ಕೆಯಾಗಿ 50 ದಿನ ಕಳೆದರೂ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಆದೇಶ ಹೊರಡಿಸದ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆಗೆ ಏರುವ ಆಕಾಂಕ್ಷಿಗಳ ಉತ್ಸಾಹ ಕುಂದುತ್ತಿದೆ.

ಮೇ ತಿಂಗಳಲ್ಲಿ ಚುನಾವಣೆ ನಡೆದು, ಸದಸ್ಯರು ಚುನಾಯಿತರಾಗಿದ್ದರು. ಆಡಳಿತ ರಚನೆಗೆ ಸರ್ಕಾರ ಆದೇಶ ಹೊರಡಿಸಿದ ಕಾರಣ ಪಟ್ಟಣದ ಹಲವು ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ.

ಕುಡಿವ ನೀರು, ಬೀದಿದೀಪ ನಿರ್ವಹಣೆ, ಸಂಪೂರ್ಣ ನೈರ್ಮಲ್ಯ, ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಬಸ್ ನಿಲ್ದಾಣ ಹಾಗೂ ಕೆಇಬಿ ವೃತ್ತದ ಹೈಮಾಸ್ಟ್ ದೀಪಗಳು ಕೆಟ್ಟು ಒಂದುವರೆ ವರ್ಷ ಕಳೆದರೂ ದುರಸ್ಥಿ ಕಂಡಿಲ್ಲ. ಕುಡಿವ ನೀರನ್ನು ಹಣಕ್ಕೆ ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಸಮೀಪದ ಕೊತಲಗುಂದಿ ಕೆರೆ ಅಂಗಳದಲ್ಲಿ ಕುಡಿವ ನೀರಿಗೆಂದು ಕಳೆದ ವರ್ಷ ಕೊರೆಸಿದ 7 ಕೊಳವೆಬಾವಿಗಳಿಂದ ನೀರು ಪೂರೈಕೆ ಕಾರ್ಯ ಇನ್ನೂ ಆರಂಭವಾಗಿಲ್ಲ. ನೀರು ಶುದ್ಧೀಕರಣ ಘಟಕಗಳಿಗೆ ನೀರಿನ ಕೊರತೆ ಕಾಡುತ್ತಿದೆ. ಫ್ಲೋರೈಡ್ ನೀರು ಬಳಸುವ ಅನಿವಾರ್ಯತೆ ಜನತೆಗೆ ಎದುರಾಗಿದೆ.

ಸೂಕ್ತ ರಸ್ತೆ, ನೀರು, ದೀಪದ ವ್ಯವಸ್ಥೆ ಇಲ್ಲದೇ ಸಾರ್ವಜನಿಕ ಶೌಚಗೃಹಗಳು ಹಂದಿಗಳ ವಾಸ ತಾಣವಾಗಿವೆ. ಪಪಂ ಆಡಳಿತ ಮಂಡಳಿ ರಚನೆಯಾದರೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸಾಧ್ಯ ಎಂಬುದು ಪಪಂ ಚುನಾಯಿತ ಸದಸ್ಯರ ಅನಿಸಿಕೆ.

Leave a Reply

Your email address will not be published. Required fields are marked *