ಮಕ್ಕಳ ಭವಿಷ್ಯ ಕತ್ತಲಾಗದಿರಲಿ

ಮೊಳಕಾಲ್ಮೂರು: ಯಾವುದೇ ಕಾರಣಕ್ಕೂ ಮಕ್ಕಳನ್ನು ವಿದ್ಯೆಯಿಂದ ವಂಚಿತಗೊಳಿಸಬೇಡಿ ಎಂದು ಪಾಲಕರಿಗೆ ತಹಸೀಲ್ದಾರ್ ಎಸ್.ಅನಿತಾ ಲಕ್ಷ್ಮೀ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ಹಣದ ಆಸೆಗೆ ಮಕ್ಕಳನ್ನು ಶಾಲೆ ಬಿಡಿಸಿ ಕೂಲಿಗೆ ಕಳುಹಿಸಿದರೆ ಅವರ ಭವಿಷ್ಯ ಕತ್ತಲಾಗಲಿದೆ. ಇದನ್ನು ಪಾಲರರು ಅರಿತು ಕೊಂಡು ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

ಅಕ್ಷರ ಕಲಿಕೆಗೆ ಬಡತನ ಮಾನದಂಡವಲ್ಲ. 6ರಿಂದ 18ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಗುರಿ. ಈ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಹೇಳಿದರು.

ಬಿಇಒ ಎನ್.ಸೋಮಶೇಖರ್, ಉಪ ಪ್ರಾಚಾರ್ಯ ಎಸ್.ಸುರೇಂದ್ರನಾಥ, ಸಿಡಿಪಿಒ ಹೊನ್ನಪ್ಪ, ಇಸಿಒ ಓಂಕಾರಪ್ಪ, ಬಿಆರ್‌ಪಿ ಮಹಾಂತೇಶ್ ಇತರರಿದ್ದರು.

Leave a Reply

Your email address will not be published. Required fields are marked *