ಬೆಳಗಾವಿ: ಇಲ್ಲಿನ ಸರ್ದಾರ್ ಮೈದಾನದಲ್ಲಿ ನಡೆಯುತ್ತಿರುವ ಖಾದಿ ಉತ್ಸವ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವೈಭವ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮಹಾತ್ಮ ಗಾಂಧಿ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಶತಮಾನೋತ್ಸವ ಅಂಗವಾಗಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜೀವನೋಪಾಯ ಅಭಿಯಾನ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಸರಸ್ ಮೇಳ ಮತ್ತು ಖಾದಿ ಉತ್ಸವದಲ್ಲಿ ಕೈಯಿಂದ ಅರಳಿದ ವಿವಿಧ ಮಾದರಿಯ ಕರಕುಶಲ ವಸ್ತುಗಳು, ಹಳೇ ಸಾಂಪ್ರದಾಯಿಕತೆ ನೆನಪಿಸುವ ಕೌದಿಗಳು, ಗೃಹೋಪಯೋಗಿ ವಸ್ತುಗಳು ವಿಶೇಷವಾಗಿ ಆಕರ್ಷಿಸುತ್ತಿವೆ. ಇಷ್ಟೇ ಅಲ್ಲದೇ ಚನ್ನಪಟ್ಟಣದ ಗೊಂಬೆ, ಕೊಪ್ಪಳದ ಕಿನ್ನಾಳ ಆಟದ ಸಾಮಾನು, ಮೊಳಕಾಲ್ಮೂರು, ಇಳಕಲ್ ಮತ್ತು ರೇಷ್ಮೆ ಸೀರೆ ನಾರಿಯರ ಮನಗೆಲ್ಲುತ್ತಿವೆ. ಇದರೊಟ್ಟಿಗೆ ಅಕ್ಕಕೆೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಈ ವೇಳದಲ್ಲಿ 150 ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿದೆ