ಜಾತಿ ಆಧಾರದ ಸಬ್ಸಿಡಿ ಸಲ್ಲ

ಮೊಳಕಾಲ್ಮೂರು: ಕೃಷಿ, ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಸಬ್ಸಿಡಿ ಯನ್ನು ಎಲ್ಲ ರೈತರಿಗೆ ಸಮಾನ ಹಂಚಿಕೆ ಮಾಡುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಕೃಷಿ ಇಲಾಖೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಜಾತಿ ಆಧಾರದಲ್ಲಿ ಸಬ್ಸಿಡಿ ವಿತರಿಸದೆ ಎಲ್ಲ ರೈತರಿಗೂ ಈ ಸೌಲಭ್ಯ ಸಿಗಲು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ತಕ್ಷಣ ವಿಮೆ ಕಂಪನಿ ಸಂಪರ್ಕಿಸಿ ಬೆಳೆವಿಮೆ,ಬೆಳೆ ನಷ್ಟ ಪರಿಹಾರ ಸಂದಾಯ ಮಾಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಪ್ರ.ಕಾರ್ಯದರ್ಶಿ ರವಿಕುಮಾರ್, ತಾಲೂಕು ಅಧ್ಯಕ್ಷ ಬಿ.ಈಶ್ವರಯ್ಯಸ್ವಾಮಿ, ಕನಕ ಶಿವಮೂರ್ತಿ, ಡಿ.ಬಿ.ಕೃಷ್ಣಮೂರ್ತಿ, ತಿಮ್ಮಪ್ಪ, ಮರಿಲಿಂಗಪ್ಪ, ನಾಗರಾಜ, ಚೌಡಣ್ಣ ಮತ್ತಿತರರಿದ್ದರು.

Leave a Reply

Your email address will not be published. Required fields are marked *