ಮೊಳಕಾಲ್ಮೂರು: ಕರೊನಾ ನಿಯಂತ್ರಣಕ್ಕಾಗಿ ಜೀವದ ಹಂಗು ತೊರೆದು ಹಗಲಿರಳು ಶ್ರಮಿಸುತ್ತಿರುವ ಪೋಲೀಸರಿಗೆ ರಾಂಘವೇಂದ್ರ ಶಾಖಾ ಮಠದಿಂದ ಮೊಸರನ್ನ, ಚಿತ್ರಾನ್ನ, ನೀರಿನ ಬಾಟಲನ್ನು ಉಚಿತವಾಗಿ ವಿತರಿಸಲಾಯಿತು.
ರಾಯರ ಮಠದ ಸಮಿತಿ ಸದಸ್ಯ ಎಂ.ಎಸ್.ಗೋಪಿನಾಥ್ ಮಾತನಾಡಿ, ದೇಶದಲ್ಲೆ ಆವರಿಸಿರುವ ಕರೊನಾ ನಿರ್ಮೂಲನೆ ಮಾಡಲು ಜನರ ಸಹಕಾರ ಬಹುಮುಖ್ಯವಾದುದು ಎಂದರು.
ಸರ್ಕಾರದ ನಿರ್ದೇಶನದಂತೆ 15 ದಿನ ಯಾರು ಮನೆಯಿಂದ ಹೊರಬರದಂತೆ ನಿರ್ಬಂಧ ಹಾಕಿ ಬುದ್ಧಿಮಾತು ಹೇಳುತ್ತಿರುವ ಪೊಲೀಸರ ಶ್ರಮ ಸಾಹಸದ ಕೆಲಸ. ಅವರ ಕರ್ತವ್ಯ ನಿಷ್ಠೆಗೆ ಸಹಕಾರ ಕೊಡುವುದು ನಮ್ಮ ಭವಿಷ್ಯದ ಹಿತದೃಷ್ಟಿಯಿಂದ ಎನ್ನುವುದನ್ನು ಎಲ್ಲರು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಸಿಪಿಐ ಗೋಪಾಲನಾಯ್ಕ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ತಾಲೂಕಿನೊಳಗೆ ಮಹಾಮಾರಿ ಕರೊನಾ ನುಸುಳದಂತೆ ಸ್ವಯಂ ಪ್ರೇರಿತವಾಗಿ ಜಾಗೃತರಾದರೆ ಅದಕ್ಕಿಂತ ದೊಡ್ಡ ಕೆಲಸ ಇನ್ನೊಂದಿಲ್ಲ. ಎಲ್ಲರಲ್ಲೂ ಮಾನವೀಯತೆಯ ತಿಳಿವಳಿಕೆ ಜ್ಞಾನತ್ವ ಇದೆ ಎಂದರು.