ಪ್ರಕೃತಿ ನಾಶದ ಪರಿಣಾಮ ಹನಿ ನೀರಿಗೂ ಪರದಾಟ

ಮೊಳಕಾಲ್ಮೂರು: ನಿರಂತರ ಪ್ರಕೃತಿ ನಾಶದ ಪರಿಣಾಮ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಶ್ರೀಶೈಲಭೀಮಸೇನ ಬಾಗಡಿ ಹೇಳಿದರು.

ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಲ ಸಂರಕ್ಷಣೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣರು ಗಿಡ ಮರಗಳನ್ನು ವಿವಿಧ ಉದ್ದೇಶಕ್ಕಾಗಿ ಕಡಿಯುವುದನ್ನು ನಿಲ್ಲಿಸಬೇಕು. ಆಗ ವರ್ಷದಿಂದ ವರ್ಷಕ್ಕೆ ಕಾಡಿನ ಪ್ರಮಾಣ ಹೆಚ್ಚಾಗಿ ಮಳೆ ಬರುತ್ತದೆ ಎಂದರು.

ಮೊಳಕಾಲ್ಮೂರು ಎಂದರೆ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ. ಕೆರೆ ಕಟ್ಟೆಗಳು ಬತ್ತಿವೆ. ಜನ ಜಾನುವಾರು ಮೇವು ನೀರಿಲ್ಲದೆ ಬಳಲುತ್ತಿವೆ ಎಂದು ಹೇಳಿದರು.
ವಕೀಲ ವಿ.ಡಿ. ರಾಘವೇಂದ್ರ ಮಾತನಾಡಿ, ನೀರಿನ ಮಿತ ಬಳಕೆ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಪರಿಸರ ಮನುಷ್ಯನ ಭವಿಷ್ಯದ ಸಂಪತ್ತು ಎಂಬುದನ್ನು ಅರಿತು ಸಾಗಬೇಕು ಎಂದರು.

ವಕೀಲರ ಸಂಘದ ಪ್ರಭಾರ ಅಧ್ಯಕ್ಷ ಪಿ. ಪಾಪಯ್ಯ, ಸರ್ಕಾರಿ ಅಭಿಯೋಜಕ ಲಿಂಗೇಶ್ವರ, ವಕೀಲರಾದ ಅನಂತಮೂರ್ತಿ, ವಿಜಯಲಕ್ಷ್ಮೀ, ಅನುಸೂಯ, ಕೆ. ವಿನೋಧ, ಆನಂದ್, ಸಿದ್ದಪ್ಪ, ಗೋವಿಂದಪ್ಪ, ಕುಮಾರಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *