ವೃತ್ತಿ ಧರ್ಮಕ್ಕೆ ಚ್ಯುತಿ ಬೇಡ

ಮೊಳಕಾಲ್ಮೂರು: ವೃತ್ತಿ ಧರ್ಮಕ್ಕೆ ಚ್ಯುತಿ ಬರದಂತೆ ನಡೆಯುವುದೇ ಗುರುವಿನ ಪರಮ ಧ್ಯೇಯ ಎಂದು ನಿವೃತ್ತ ಪ್ರಾಚಾರ್ಯ ಜಿ.ವಿ.ನಾಗರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಸಿಬ್ಬಂದಿಯಿಂದ ಶನಿವಾರ ಗೌರವ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಎಂಬುದು ಸೇವಾ ಕ್ಷೇತ್ರ. ಇಲ್ಲಿ ಯಾವುದನ್ನೂ ನಿರೀಕ್ಷಿಸದೆ ಜ್ಞಾನ ಧಾರೆ ಎರೆದರೆ ಸ್ವಾಸ್ಥೃ ಸಮಾಜ ನಿರ್ಮಾಣ ಸಾಧ್ಯ ಎಂದರು.

ಉಪನ್ಯಾಸಕ ಬಿ.ಎನ್.ತಿಪ್ಪೇಸ್ವಾಮಿ ಮಾತನಾಡಿ, ಮೊಬೈಲ್, ಟಿ.ವಿ, ಸಿನಿಮಾ ಇತ್ಯಾದಿ ಆಧುನಿಕ ಮಾಧ್ಯಮಗಳ ಮೊರೆ ಹೋಗುವ ಬದಲು ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಂಡು ಭ ವಿಷ್ಯ ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಉಪನ್ಯಾಸಕರಾದ ಚಂದ್ರಶೇಖರ, ಡಿ. ನಾಗರಾಜ್, ಗಾದಯ್ಯ, ತಿಮ್ಮಪ್ಪ, ಗ್ರಂಥಪಾಲಕಿ ಎಚ್.ಭಾಗ್ಯಮ್ಮ ಹಾಗೂ ನೂರಾರು ವಿದ್ಯಾರ್ಥಿಗಳಿದ್ದರು.