ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗೆ ಮೊಹಮ್ಮದ್​ ಸಮಿ ಧನಸಹಾಯ

ನವದೆಹಲಿ: ಪುಲ್ವಾಮಾದಲ್ಲಿ ಉಗ್ರನ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಕುಟುಂಬ ವರ್ಗದವರಿಗೆ ಧನಸಹಾಯ ನೀಡುವುದಾಗಿ ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್​ ಸಮಿ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿ, ನಾವು ರಾಷ್ಟ್ರವನ್ನು ಪ್ರತಿನಿಧಿಸಿ ಕ್ರಿಕೆಟ್​ ಆಡುವಾಗ ಯೋಧರು ನಮ್ಮ ರಾಷ್ಟ್ರದ ಗಡಿಯಲ್ಲಿ ಕಾವಲು ಕಾಯುತ್ತಿರುತ್ತಾರೆ. ನಮ್ಮವರಲ್ಲದೆ, ನಮ್ಮ ಅಭಿಮಾನಿಗಳು ಕೂಡ ಆರಾಮವಾಗಿರಲು ನೆರವಾಗುತ್ತಾರೆ. ಆದ್ದರಿಂದ, ನಮಗಾಗಿ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬ ವರ್ಗದವರೊಂದಿಗೆ ನಿಲ್ಲುವ ಹಾಗೂ ಅವರಿಗೆ ನೆರವಾಗುವ ಸಮಯ ಈಗ ಕೂಡಿಬಂದಿದೆ. ನಾವು ಸದಾ ಅವರೊಂದಿಗೆ ಇರುತ್ತೇವೆ ಎಂದು ತಿಳಿಸಿದ್ದಾರೆ. ಆದರೆ, ತಾವು ನೀಡಲಿರುವ ಧನಸಹಾಯದ ಮೊತ್ತವನ್ನು ಬಹಿರಂಗಪಡಿಸಿಲ್ಲ. (ಏಜೆನ್ಸೀಸ್​)