ನವದೆಹಲಿ: ಐಪಿಎಲ್ 18ನೇ ಆವೃತ್ತಿಗೂ ಮುನ್ನ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಅನುಭವಿ ವೇಗಿ ಮೊಹಮದ್ ಶಮಿ ಅವರ ಸಂಭಾವನೆಯಲ್ಲಿ ಇಳಿಕೆಯಾಗಲಿದೆ ಎಂದು ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಕಾರ ಸಂಜಯ್ ಮಂಜ್ರೆಕರ್ ನುಡಿದಿರುವ ಭವಿಷ್ಯವನ್ನು ಶಮಿ ವ್ಯಂಗ್ಯವಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಶಮಿ ವಿಚಾರವಾಗಿ ಮಾತನಾಡಿರುವ ಮಂಜ್ರೇಕರ್, ಐಪಿಎಲ್‌ನ ಹಲವು ್ರಾಂಚೈಸಿಗಳು ಶಮಿ ಅವರ ಖರೀದಿಗೆ ಆಸಕ್ತಿ ಹೊಂದಿವೆ. ಆದರೆ ಸರಿ ಸುಮಾರು ಒಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿರುವ ಶಮಿಗೆ ಗಾಯದ ಸಮಸ್ಯೆ ಹಿನ್ನಡೆ ಎನಿಸಿದೆ. ಇತ್ತೀಚಿನ ಬೆಳವಣಿಗೆಗಳಲ್ಲಿ ಶಮಿ ಪದೆ ಪದೇ ಗಾಯದ ಸಮಸ್ಯೆ ಎದುರಿಸಿದ್ದು, ಒಂದು ವೇಳೆ ಟೂರ್ನಿಯ ಮಧ್ಯದಲ್ಲಿ ಅವರು ತಂಡಕ್ಕೆ ಅಲಭ್ಯರಾದರೆ, ಬೌಲಿಂಗ್ ವಿಭಾಗ ಸಮತೋಲನ ಕಳೆದುಕೊಳ್ಳಲಿದೆ. ಇದರ ಬಗ್ಗೆ ಹಲವು ್ರಾಂಚೈಸಿಗಳು ಯೋಚಿಸಲಿವೆ. ಏಕೆಂದರೆ ್ರಾಂಚೈಸಿಗಳು ಒಬ್ಬ ಆಟಗಾರರ ಲಭ್ಯತೆ ಹಾಗೂ ಪ್ರದರ್ಶನ ಆಧರಿಸಿ ಮೆಗಾ ಹರಾಜಿನಲ್ಲಿ ಹೆಚ್ಚು ಹಣ ವ್ಯಯಿಸಿ ಖರೀದಿ ಮಾಡುತ್ತವೆ. ಆದ್ದರಿಂದ ಇದು ಶಮಿ ಅವರ ಸಂಭಾವನೆಯಲ್ಲಿ ಇಳಿಕೆಯಾಗಲು ಪ್ರಮುಖ ಕಾರಣ ಎನಿಸಿದೆ ಎಂದು ವಿವರಿಸಿದ್ದರು.
ಇದಕ್ಕೆ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಉತ್ತರಿಸಿರುವ 34 ವರ್ಷದ ಶಮಿ,‘ನಿಮ್ಮ ಭವಿಷ್ಯಕ್ಕಾಗಿ ಸ್ವಲ್ಪ ಜ್ಞಾನವನ್ನು ಉಳಿಸಿಕೊಳ್ಳಿ ಸಂಜಯ್ ಜೀ. ಯಾರಾದರೂ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಬಯಸಿದರೆ ಸರ್ (ಸಂಜಯ್) ಅವರನ್ನು ಭೇಟಿಯಾಗಿ’ಎಂದು ಬರೆದುಕೊಂಡಿದ್ದಾರೆ.
2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ 20 ವಿಕೆಟ್ ಕಬಳಿಸಿದ್ದ ಶಮಿ ಈ ಬಾರಿಯ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ.