ಪಿಚ್​ನ ಮಧ್ಯೆ ಓಡಿದ ಪಾಕಿಸ್ತಾನದ ವೇಗಿ ಮೊಹಮದ್​ ಆಮಿರ್​ಗೆ 2 ಬಾರಿ ಎಚ್ಚರಿಕೆ ನೀಡಿದ ಅಂಪೈರ್​

ಮ್ಯಾಚೆಂಸ್ಟರ್​: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಹೈವೋಲ್ಟೇಜ್​ ಪಂದ್ಯದಲ್ಲಿ ಪಿಚ್​ನ ಮಧ್ಯೆ ಓಡಿದ್ದಕ್ಕಾಗಿ ಪಾಕಿಸ್ತಾನದ ವೇಗಿ ಮೊಹಮದ್​ ಆಮಿರ್​ಗೆ ಅಂಪೈರ್​ ಎರಡು ಬಾರಿ ಎಚ್ಚರಿಕೆ ನೀಡಿದ್ದಾರೆ.

ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡ ಪಾಕಿಸ್ತಾನದ ಪರ ಬೌಲಿಂಗ್​ ಆರಂಭಿಸಿದ ಮೊಹಮದ್​ ಆಮೀರ್​ ಮೊದಲ ಓವರ್​ ಅನ್ನು ಮೇಡನ್​ ಮಾಡಿದರು. ಇದೇ ಹುಮ್ಮಸ್ಸಿನಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವ ಪ್ರಯತ್ನದಲ್ಲಿದ್ದ ಆಮೀರ್​ ತಮ್ಮ ಎರಡನೇ ಓವರ್​ನಲ್ಲಿ ಡೇಂಜರ್​ ಏರಿಯಾ ಎಂದೇ ಕರೆಯಲ್ಪಡುವ ಪಿಚ್​​ನ ಮಧ್ಯೆ ಓಡಿದರು. ಇದಕ್ಕಾಗಿ ಆಮೀರ್​ಗೆ ಅಂಪೈರ್​ ಬ್ರೂಸ್​ ಆಕ್ಸೆನ್​ಫೋರ್ಡ್​ ಮೊದಲ ಎಚ್ಚರಿಕೆ ನೀಡಿದರು.

ಆ ನಂತರ ಪಂದ್ಯದ ಐದನೇ ಓವರ್​ನಲ್ಲಿ ಆಮೀರ್​ ಮತ್ತೆ ಪಿಚ್​ನ ಮಧ್ಯೆ ಓಡಿದರು. ಈ ಬಾರಿ ಅಂಪೈರ್​ 2ನೇ ಬಾರಿಕೆ ಎಚ್ಚರಿಕೆ ನೀಡಿದರು. ಐಸಿಸಿ ನಿಯಮಾವಳಿಗಳ ಪ್ರಕಾರ ಬಾಲ್​ ಎಸೆದ ನಂತರ ಬೌಲರ್​ ಪಿಚ್​ ಮಧ್ಯೆ ಓಡುವಂತಿಲ್ಲ. ಬ್ಯಾಟ್ಸ್​ಮನ್​ಗಳೂ ಸಹ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆದರೆ ಪಂದ್ಯದಲ್ಲಿ ಆಮೀರ್​ 2 ಬಾರಿ ಈ ತಪ್ಪು ಎಸಗಿದ್ದಾರೆ. ಮತ್ತೊಮ್ಮೆ ಆಮೀರ್​ ಪಿಚ್​ ಮಧ್ಯೆ ಓಡಿದರೆ ಅವರು ಈ ಪಂದ್ಯದಲ್ಲಿ ಬೌಲಿಂಗ್​ ಮಾಡದಂತೆ ನಿರ್ಬಂಧ ಹೇರಬಹುದಾಗಿದೆ.

ಇತ್ತೀಚಿನ ವರದಿ ಬಂದಾಗಿ ಮೊಹಮದ್​ ಆಮೀರ್​ 4 ಓವರ್​ ಬೌಲಿಂಗ್​ ಮಾಡಿದ್ದು 8 ರನ್​ ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *