ಪಕ್ಕದ ಮನೆ ಮಹಿಳೆಗೆ ಫ್ಲೈಯಿಂಗ್ ಕಿಸ್​ ಕೊಟ್ಟು ಬಂಧಿತನಾದ ಭೂಪ; ಮೂರು ವರ್ಷ ಶಿಕ್ಷೆ, ದಂಡ ವಿಧಿಸಿದ ಕೋರ್ಟ್​

ಚಂಡೀಗಢ​​: ಪಕ್ಕದ ಮನೆ ಮಹಿಳೆಗೆ ತೊಂದರೆ ಕೊಟ್ಟು ಮೂರು ವರ್ಷ ಜೈಲು ಶಿಕ್ಷೆಗೆ ಒಳಗಾದವನ ಕತೆ ಇದು.

ಇದು ನಡೆದಿದ್ದು ಮೊಹಾಲಿಯಲ್ಲಿ. ವಿನೋದ ಬಂಧಿತ ವ್ಯಕ್ತಿ. ಈತನ ವಿರುದ್ಧ ದೂರು ಕೊಟ್ಟಿದ್ದು ಶೋಷಣೆಗೆ ಒಳಗಾದ ಆತನ ಪಕ್ಕದ ಮನೆಯ ಮಹಿಳೆ.

ಈ ಮಹಿಳೆ ಪತಿಯ ಜತೆ ಮೊಹಾಲಿಯಲ್ಲಿ ವಾಸವಾಗಿದ್ದಳು. ವಿನೋದ್​ ಅವರ ನೆರೆಮನೆಯಲ್ಲಿ ವಾಸವಾಗಿದ್ದ. ಅಂದರೆ, ಈ ದಂಪತಿ ವಾಸವಾಗಿದ್ದ ವಸತಿಗೃಹದ ಮೇಲಿನ ಮನೆಯಲ್ಲಿ ಇದ್ದ. ತನ್ನ ಕಂಡಕೂಡಲೇ ಕೆಟ್ಟದಾಗಿ ಕಾಮೆಂಟ್​ ಮಾಡುವುದು, ಅನುಚಿತವಾಗಿ ಸನ್ನೆಗಳನ್ನು ಮಾಡುವುದು, ಫ್ಲೈಯಿಂಗ್​ ಕಿಸ್​ ಕೊಡುವುದೆಲ್ಲ ಮಾಡುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಮಹಿಳೆ ಈ ಬಗ್ಗೆ ಪತಿಗೂ ತಿಳಿಸಿದ್ದರು. ಅವರಿಬ್ಬರೂ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ವಿನೋದ್​ ಕೂಡ ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ದೂರು ನೀಡಿ, ಅವರಿಬ್ಬರೂ ನನಗೆ ಹೊಡೆದಿದ್ದಾರೆ ಎಂದು ಆರೋಪ ಮಾಡಿದ್ದಾನೆ.

ಆದರೆ, ಆತ ನೀಡಿದ ದೂರಿನಲ್ಲಿ ಸತ್ಯಾಂಶ ಇಲ್ಲ ಎಂಬುದು ಪೊಲೀಸ್​ ತನಿಖೆಯಿಂದ ತಿಳಿದು ಬಂದಿದೆ. ಮಹಿಳೆ ಜತೆ ಅನುಚಿತ ವರ್ತನೆ ಆರೋಪದಡಿ ವಿನೋದ್​ಗೆ ಮೂರು ವರ್ಷ ಜೈಲು ಶಿಕ್ಷೆ, 3000 ರೂಪಾಯಿ ದಂಡ ವಿಧಿಸಿ ಮೊಹಾಲಿ ಕೋರ್ಟ್​ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *