ಸುಳ್ಳನ್ನು ಜೋರಾಗಿ ಹೇಳುವ ಮೋದಿ ಅದು ಸತ್ಯ ಆಗುವವರೆಗೂ ಬಿಡಲ್ಲ: ಬಿ ಕೆ ಹರಿಪ್ರಸಾದ್‌

ಹಾವೇರಿ: ನಮೋ ಸುಳ್ಳಿನ ಸರದಾರ. ಕಳ್ಳರ ಕೈಗೆ ಕೀಲಿ ಕೈ ಕೊಟ್ಟಿದ್ದೇವೆ ಎಂದು ಜನರಿಗೆ ಅರ್ಧವಾಗಿದೆ. ಅವರ ಕಳ್ಳರ ಅಂಗಡಿಯನ್ನು ಜನ ಮುಚ್ಚಿಸುತ್ತಾರೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್‌ ಟೀಕಿಸಿದ್ದಾರೆ.

ಆಶ್ವಾಸನೆ ಮೇಲೆ ಆಶ್ವಾಸನೆ ನೀಡಿ ಸುಳ್ಳಿನ ಸರಮಾಲೆಯನ್ನೇ ಹೆಣೆದರು. ಇಡೀ ವಿಶ್ವದಲ್ಲೇ ಅತೀ ಹೊಡ್ಡ ಹಗರಣ ಎನಿಸಿಕೊಂಡಿರುವ ರಫೇಲ್ ಹಗರಣದ ಕಡತ ನಾಪತ್ತೆಯಾಗಿದೆ. ಸರ್ಕಾರ ಇವರದ್ದೇ, ಮನೆಯಲ್ಲಿದ್ದವರೇ ಕಳ್ಳತನ ಮಾಡಿದ್ರಾ? ಮನೆ ಕಳ್ಳನೇ ಅದನ್ನು ಕದ್ದಿರಬಹುದು. ಕಡತ ನಾಪತ್ತೆ ಎಂದು ಸುಪ್ರೀಂ ಮುಂದೆ ಹೇಳಿದರು. ನಿನ್ನೆ ಏಕಾಏಕಿ ಫೈಲ್ ನಾಪತ್ತೆ ಆಗಿಲ್ಲ ಅಂತ ತಿಳಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಜನ ಅವರನ್ನು ತಿರಸ್ಕರಿಸಿದರು. ಸದ್ಯ ಸಮ್ಮಿಶ್ರ ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಮೋದಿ, ಅಮಿತಾ ಷಾ ನೇರ ಕಾರಣ. ಡಾ. ಮನ್‌ಮೋಹನ್‌ ಸಿಂಗ್ ಪ್ರಧಾನಿಯಾಗಿದ್ದಾಗ ಉದ್ಯೋಗ, ಶಿಕ್ಷಣದ ಕ್ರಾಂತಿ ಮಾಡಿದ್ದರು. ಒಂದು ಸುಳ್ಳನ್ನು ಜೋರಾಗಿ ಹೇಳುವ ಮೋದಿ ಅದು ಸತ್ಯ ಆಗುವವರೆಗೂ ಬಿಡುವುದಿಲ್ಲ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಗೆ ಮೀಸಲಿಟ್ಟಿದ್ದ ಶೇ. 40ರಷ್ಟು ಹಣ ಅದರ ಜಾಹೀರಾತಿಗೆ ಹೋಗಿದೆ ಎಂದರು.

ಈ ಐದು ವರ್ಷ ಸಾಕಷ್ಟು ಅನುಭವಿಸಿದ್ದೇವೆ. ಈ ಬಾರಿಯ ಲೋಕಸಭೆಯ ಚುನಾವಣೆಗೆ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್)