ಸುಳ್ಳುಗಾರರ ಮುಖ್ಯಸ್ಥ, ವಿಭಜನಕಾರಿ ಶಕ್ತಿಗಳ ಮುಖ್ಯಸ್ಥ, ಅಂಬಾನಿ ಮತ್ತು ಅದಾನಿ ಅವರ ಬಿಜಿನೆಸ್​ ಮ್ಯಾನೇಜರ್​…

ಇಂದೋರ್​: ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಾರರ ಸಂಸ್ಥೆಯ ಮುಖ್ಯಸ್ಥ. ವಿಭಜನಾಕಾರಿ ಶಕ್ತಿಗಳ ಮುಖ್ಯಸ್ಥ. ಎಲ್ಲಕ್ಕಿಂತ ಮಿಗಿಲಾಗಿ ಅಂಬಾನಿ ಮತ್ತು ಅದಾನಿಯಂಥ ಕೈಗಾರಿಕೋದ್ಯಮಿಗಳ ಬಿಜಿನೆಸ್​ ಮ್ಯಾನೇಜರ್​ ಎಂದು ಪಂಜಾಬ್​ ಸಚಿವ ಹಾಗೂ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಲೇವಡಿ ಮಾಡಿದ್ದಾರೆ.

ಇಂದೋರ್​ನಲ್ಲಿ ಆಯೋಜನೆಗೊಂಡಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಧಾನಿ ಮೋದಿ ಅವರದ್ದು ಕೇವಲ ಬಂಡವಾಳವಿಲ್ಲದ ಬಡಾಯಿ ಎಂದು ಕುಚೋದ್ಯ ಮಾಡಿದರು.

ಪ್ರಧಾನಿ ಮೋದಿ ಒಂದು ರೀತಿ ನವವಿವಾಹಿತೆ ಇದ್ದಂತೆ. ರೊಟ್ಟಿ ಮಾಡಲು ಸೋಂಬೇರಿತನ ತೋರಿದರೂ, ನಾಲ್ಕು ಜನರು ಈಕೆ ತುಂಬಾ ಕೆಲಸ ಮಾಡುತ್ತಿದ್ದಾಳೆ ಎಂಬುದನ್ನು ತೋರಿಸಿಕೊಳ್ಳಲು ಬಳೆಯ ಸದ್ದು ಮಾಡುವವಳಿದ್ದಂತೆ ಎಂದು ಟೀಕಿಸಿದರು.(ಏಜೆನ್ಸೀಸ್​)

Leave a Reply

Your email address will not be published. Required fields are marked *