ಮೋದಿ, ಅಮಿತ್​ ಷಾ ಸಚಿವ ಸಂಪುಟದಲ್ಲಿ ಯಾವುದೇ ಸಚಿವ ಸ್ಥಾನ ನೀಡಿದರೂ ನಿಭಾಯಿಸಲು ಸಿದ್ಧ: ಡಿ.ವಿ.ಸದಾನಂದಗೌಡ

ಬೆಂಗಳೂರು: ಎರಡನೇ ಬಾರಿಗೆ ಪ್ರಧಾನಿಯಾಗಿ ಮೋದಿಯವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಅವರ ಸಚಿವ ಸಂಪುಟದಲ್ಲಿ ರಾಜ್ಯದಿಂದ ಸಂಸದರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್​ಜೋಶಿ, ಸುರೇಶ್​ ಅಂಗಡಿಯವರು ಸಚಿವರಾಗುವುದು ಖಚಿತವಾಗಿದೆ.

ಸಂಸದರಾದ ಡಿ.ವಿ.ಸದಾನಂದಗೌಡ ಅವರು ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡಿದ್ದು, ನರೇಂದ್ರ ಮೋದಿ, ಅಮಿತ್​ ಷಾ ಅವರ ಸಚಿವ ಸಂಪುಟದಲ್ಲಿ ಯಾವುದೇ ಸ್ಥಾನವನ್ನು ನೀಡಿದರೂ ಸಂತಸದಿಂದ ನಿಭಾಯಿಸುತ್ತೇನೆ. ಅದು ನನಗೆ ದೊಡ್ಡ ಸ್ಥಾನಮಾನವಾಗಿದೆ ಎಂದರು.

ಹಾಗೆಯೇ ಮೋದಿಯವರು ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧರಿರುವುದಾಗಿ ತಿಳಿಸಿದರು. ಮಂತ್ರಿ ಮಂಡಲದ ರಚನೆ ಪ್ರಧಾನಿಯವರಿಗೆ ಸೇರಿದ್ದು. ಅವರ ತಂಡದಲ್ಲಿ ಯಾರು ಇರಬೇಕು ಎಂದು ಅವರು ನಿರ್ಧರಿಸುತ್ತಾರೆ. ನನಗೆ ಅವಕಾಶ ನೀಡುತ್ತಿದ್ದು ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿದರು.

ಆಡಳಿತ ಸೂತ್ರಗಳನ್ನು ಹೇಗೆ ನಡೆಸಬೇಕು ಎಂದು ಹೇಳಲು ಈ ಎರಡು ಜೋಡಿಗಿಂತ ದೊಡ್ಡ ಉದಾಹರಣೆ ಈ ಶತಮಾನದಲ್ಲಿ ಈ ದೇಶದಲ್ಲಿ ಬರಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಮತ್ತು ಅಮಿತ್​ ಷಾ ಜೋಡಿಯನ್ನು ಹೊಗಳಿದರು. (ದಿಗ್ವಿಜಯನ್ಯೂಸ್​)

Leave a Reply

Your email address will not be published. Required fields are marked *