ಗುಳೇದಗುಡ್ಡ: ಹೋಳಿ ಹಬ್ಬದ ಅಂಗವಾಗಿ ಗುಳೇದಗುಡ್ಡ ನಗರದಲ್ಲಿ ವಿವಿಧ ಓಣಿಗಳಲ್ಲಿ ಗೆಳೆಯರ ಬಳಗ, ಮೇಳಗಳ ಯುವಕರು ಕಾಮಣ್ಣ ರತಿದೇವಿ ಮೂರ್ತಿಯನ್ನು ಗುರುವಾರ ಪ್ರತಿಷ್ಠಾಪನೆ ಮಾಡಿ, ಸಂಜೆ ಕಾಮದಹನ ಮಾಡಿದರು. ಶುಕ್ರವಾರ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಓಕಳಿಯಾಟ ಆಡಿ ಸಂಭ್ರಮಿಸಿದರು.
ನಗರದ ನಗ್ಲಿಪೇಟೆಯ ನಾಟ್ಯಸಂಘ, ಜೇರಕಲ್ ಮ್ಯಾಳ, ರಾಜಂಗಳ ಪೇಟೆಯ ಪ್ರೇಮಕಲಾ ನಾಟ್ಯ ಸಂಘ ಹಾಗೂ ಅಣಕು ಹೆಣದ ಸೋಗಿನ ಬಂಡಿ ಮಾಡಿದ್ದವು. ಪುರುಷನಿಗೆ ಮಹಿಳೆಯ ವೇಷಹಾಕಿ, ಹೆಣದಂತೆ ಸಿಂಗಾರಮಾಡಿ ಟ್ರಾೃಕ್ಟರ್‌ನಲ್ಲಿ ಕೂರಿಸಿ ಹಲಗಿ ಬಡಿಯುತ್ತ ಮೆರವಣಿಗೆ ಮಾಡಿದರು. ಹೆಣ್ಣುಮಕ್ಕಳ ವೇಷಧರಿಸಿದ ಪುರಷರು, ನಾನಾ ತರಹದ ಕಸರತ್ತು, ಹಾವಭಾವ, ನಗೆ ಚಟಾಕಿಗಳನ್ನು ಹಾರಿಸಿ, ರಸ್ತೆಯುದ್ದಕ್ಕೂ ನರೆದಿದ್ದ ಜನರನ್ನು ರಂಜಿಸಿದರು. ಅಣಕು ಹೆಣದ ಸೋಗು ನೋಡಲು ನಗರದ ರಸ್ತೆಯುದ್ದಕ್ಕೂ ಸಾವಿರಾರು ಜನರು ಸೇರಿದ್ದರು.
TAGGED:ಗುಳೇದಗುಡ್ಡ