ಬಂಕಾಪುರ: ಪಟ್ಟಣದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮಂಗಳವಾರ ಬಂಧಿಸಿರುವ ಇಲ್ಲಿಯ ಬಂಕಾಪುರ ಠಾಣೆ ಪೊಲೀಸರಿಂದ ಆತನಿಂದ 84 ಸಾವಿರ ರೂ. ಮೌಲ್ಯದ 8 ಆ್ಯಂಡ್ರಾಯ್ಡ್ ಮೊಬೈಲ್ ಹಾಗೂ 5 ಕೀಪ್ಯಾಡ್ ೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾನಗಲ್ಲ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದ ಕ್ಕೀರಪ್ಪ ಗದಿಗೆಪ್ಪ ಹರಿಜನ (51) ಬಂಧಿತ ಆರೋಪಿ.
ಈತ ಬಂಕಾಪುರ ಬಸ್ ನಿಲ್ದಾಣ ಸೇರಿ ಜನಸಂದಣಿ ಪ್ರದೇಶದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಎಸ್ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಬಂಕಾಪುರ ಠಾಣೆ ಪಿಎಸ್ಐ ನಿಂಗರಾಜ ಕರಕಣ್ಣನವರ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿತ್ತು.
ಬಸ್ ನಿಲ್ದಾಣದಲ್ಲಿ ಆರೋಪಿ ಕ್ಕೀರಪ್ಪ ನಿಂತಿದ್ದಾಗ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
