ಮೊಬೈಲ್​ ಕಳೆದುಹೋಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಮೈಸೂರು: ಮೊಬೈಲ್​ ಕಳೆದುಹೋಗಿದ್ದಕ್ಕೆ ಬೇಸರಗೊಂಡ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಗಾಂಧಿನಗರದಲ್ಲಿ ನಡೆದಿದೆ.

ನಿಖಿತಾ (17) ಮೃತ ವಿದ್ಯಾರ್ಥಿನಿ. ಈಕೆ ಗಾಯತ್ರಿಪುರಂನ ಗಣಪತಿ ಸಚ್ಚಿದಾನಂದ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದಳು. ಮೊಬೈಲ್​ ಕಳೆದಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಎನ್​.ಆರ್​.ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.