ನಿಮ್ಮ ಮೊಬೈಲ್​ ನಂಬರ್​ ಬಹುಮಾನ ಗೆದ್ದಿದೆ ಎಂಬ ಕರೆ ನಂಬಿದ ಯುವಕ: ಪಾರ್ಸಲ್​ ಬಾಕ್ಸ್​ನಲ್ಲಿದ್ದುದನ್ನು ನೋಡಿ ಪೆಚ್ಚಾದ

ರಾಯಚೂರು: ನಿಮ್ಮ ಮೊಬೈಲ್​ ನಂಬರ್​ ಬಹುಮಾನ ಗೆದ್ದಿದೆ ಎಂಬ ಸಂದೇಶ, ಕರೆಗಳು ಬಹುತೇಕ ಮೊಬೈಲ್​ಗಳಿಗೆ ಬರುತ್ತಲೇ ಇರುತ್ತದೆ. ಇದನ್ನೆಲ್ಲ ನಂಬಿದರೆ ಮೋಸ ಹೋಗುವುದು ಗ್ಯಾರಂಟಿ ಎಂದು ಈ ಘಟನೆ ಸಾಬೀತು ಮಾಡಿದೆ.

ಮಾನವಿ ತಾಲೂಕಿನ ಗೋರಕಲ್​ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ಈ ಅನುಭವ ಆಗಿದೆ. ರಮೇಶ್​ ಎಂಬುವರಿಗೆ ಇದೇ ರೀತಿ ಕರೆ ಬಂದಿತ್ತು. ನಿಮ್ಮ ಮೊಬೈಲ್​ ಸ್ಯಾಮ್ಸಂಗ್​ ಮೊಬೈಲ್​ ಗೆದ್ದಿದೆ. ಅದನ್ನು ತೆರೆಯಲು 1700 ರೂ.ಪಾವತಿ ಮಾಡಿ ಎಂದು ಕರೆ ಬಂದಿತ್ತು. ಅದನ್ನು ನಂಬಿದ ರಮೇಶ್​ ದುಡ್ಡು ಪಾವತಿಸಿದ್ದಾರೆ. ನಂತರ ಅವರಿಗೆ ಒಂದು ಬಾಕ್ಸ್​ ಪಾರ್ಸಲ್​ ಕೂಡ ಬಂದಿದೆ. ಕಾತರದಿಂದ ಪೋಸ್ಟ್​ ಆಫೀಸ್​ನಲ್ಲೇ ಬಾಕ್ಸ್​ ತೆರೆದಾಗ ಅದರಲ್ಲಿ ಸಿಕ್ಕಿದ್ದು ಸ್ವೀಟ್​ ಮತ್ತು ಎರಡು ರೋಲ್ಡ್​ಗೋಲ್ಡ್​ ಚೈನು. ಅದನ್ನು ನೋಡಿ ರಮೇಶ್​ ಪೆಚ್ಚಾಗಿದ್ದಾರೆ.

ಈ ಪ್ರಕರಣದ ಹಿಂದೆ ಯುವತಿಯರ ಗುಂಪೊಂದು ಇದೆ ಎಂದು ಹೇಳಲಾಗಿದೆ.

One Reply to “ನಿಮ್ಮ ಮೊಬೈಲ್​ ನಂಬರ್​ ಬಹುಮಾನ ಗೆದ್ದಿದೆ ಎಂಬ ಕರೆ ನಂಬಿದ ಯುವಕ: ಪಾರ್ಸಲ್​ ಬಾಕ್ಸ್​ನಲ್ಲಿದ್ದುದನ್ನು ನೋಡಿ ಪೆಚ್ಚಾದ”

  1. ಜಗತ್ತು 5g ಗೆ ತಲುಪಿದೆ ಆದರೆ ಜನರ ತಲೆ ಇನ್ನು 2g ಗೂ ತಲುಪಿಲ್ಲ so sad……. ಇನ್ನು ಸಾಮಾನ್ಯ ಜ್ಞಾನ ಇಲ್ಲ ಎಂದು ತೋರ್ತದೆ……

Comments are closed.