ಮಾನ್ವಿ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭವಾಗಿ ಎರಡು ವಾರವಾಗಿದ್ದರೂ ರೈತರು ಬೆಳೆದಿರುವ ಬೆಳೆಗಳನ್ನು ದಾಖಲೀಕರಣ ಮಾಡುತ್ತಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಗುರುನಾಥ ಎಂ.ಭೂಸನೂರ ಹೇಳಿದರು.
ಯರಮಲದೊಡ್ಡಿ ಗ್ರಾಮದಲ್ಲಿ ಶನಿವಾರ ಬೆಳೆ ಸಮೀಕ್ಷೆ ಕೈಗೊಂಡು ಮಾತನಾಡಿದರು. ರೈತರು ಬೆಳೆದ ಬೆಳೆಗಳ ನಿಖರ ಮಾಹಿತಿ ಪಡೆಯಲು ಸರ್ಕಾರದಿಂದ ಕ್ರಾಪ್ ಸರ್ವೆ ಖಾರೀಫ್ 2024 ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದುವರೆಗೆ 274 ರೈತರು ಬೆಳೆ ಸಮೀಕ್ಷೆ ವಿವರ ದಾಖಲಿಸಿದ್ದಾರೆ ಎಂದರು.
ಮಾನ್ವಿ ಮತ್ತು ಸಿರವಾರ ತಾಲೂಕುಗಳಲ್ಲಿ 1.2 ಲಕ್ಷ ರೈತರು ಬೆಳೆ ಸಮೀಕ್ಷೆ ವಿವರ ದಾಖಲಿಸುವುದು ಬಾಕಿ ಉಳಿದಿದೆ. ಕೂಡಲೇ ರೈತರು ಮೊಬೈಲ್‌ನಲ್ಲಿ ಆ್ಯಪ್ ಮೂಲಕ ಮಾಹಿತಿಯನ್ನು ದಾಖಲಿಸಬೇಕು. ಆ್ಯಂಡ್ರೈಡ್ ಮೊಬೈಲ್ ಇಲ್ಲದ ರೈತರಿಗಾಗಿ ಕಂದಾಯ ಇಲಾಖೆಯಿಂದ ಪಿಆರ್‌ಗಳನ್ನು ನೇಮಕ ಮಾಡಲಾಗಿದೆ. ಮೊಬೈಲ್ ತಂತ್ರಾಂಶದಲ್ಲಿ ಬೆಳೆಗಳ ನಿಖರ ಮಾಹಿತಿ ನೀಡುವುದರಿಂದ ಬೆಳೆ ಹಾನಿ ಪರಿಹಾರ, ವಿಮೆ ಪಡೆಯುವಾಗ ಆಗುವ ತೊಂದರೆ ತಪ್ಪಿಸಬಹುದಾಗಿದೆ ಎಂದು ಗುರುನಾಥ ಹೇಳಿದರು.