Thursday, 13th December 2018  

Vijayavani

Breaking News

ಶಿಕ್ಷಕರ ವರ್ಗಾವಣೆ ಮಾಡಿಲ್ಲ, ಪದವೀಧರರಿಗಿಲ್ಲ ಉದ್ಯೋಗ

Thursday, 31.05.2018, 5:57 PM       No Comments

ಕಲಬುರಗಿ: ಶಿಕ್ಷಕರ ಸಾರ್ವತ್ರಿಕ ವರ್ಗಾವಣೆ ಮಾಡದ ಈ ಹಿಂದಿನ ಕಾಂಗ್ರೆಸ್ ಸರ್ಕಾರ, ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳದೆ ಯುವಕರು, ಪದವೀಧರರಿಗೆ ಮೋಸ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮತ್ತು ಬಿಜೆಪಿ ರಾಜ್ಯ ಸಹ ವಕ್ತಾರ ಶಶೀಲ್ ನಮೋಶಿ ಗಂಭೀರ ಆರೋಪ ಮಾಡಿದರು.

ಹಿಂದಿನ ಸರ್ಕಾರ ನಿಲುವಿನಿಂದ ಬೇಸತ್ತ ಪದವೀಧರರು ಬಿಜೆಪಿಗೆ ಬೆಂಬಲಿಸಲಿದ್ದು, ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕೆ.ಬಿ.ಶ್ರೀನಿವಾಸ ಗೆಲ್ಲುವುದು ಖಚಿತ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಹಿಂದೆ ಬಿಜೆಪಿ ಸರ್ಕಾರ ಮಾಡಿರುವ ಜನಪರ ಕೆಲಸ ಹಾಗೂ ಯುವಕರು, ಪದವೀಧರರಿಗೆ, ಶಿಕ್ಷಕರಿಗೆ ನೀಡಿರುವ ಕೊಡುಗೆಗಳನ್ನು ನೋಡಿ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದರು.

ಆರ್ಎಂಎಸ್ ಯೋಜನೆಯಡಿ ಶಿಕ್ಷಕರಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ. ಪಿಯು ಶಿಕ್ಷಕರ ನೇಮಕಕ್ಕೆ ಅಜರ್ಿ ಕರೆದು ನಿರುದ್ಯೋಗಿಗಳಿಂದ ಶುಲ್ಕ ಪಾವತಿಸಿಕೊಂಡು ಪರೀಕ್ಷೆ ನಡೆಸಲಿಲ್ಲ, ಶುಲ್ಕವನ್ನು ಸಹ ಮರಳಿ ನೀಡಲಿಲ್ಲ. ಇದ್ಯಾವ ನ್ಯಾಯ ಎಂದು ಅರುಣ ಶಹಾಪುರ ಖಾರವಾಗಿ ಪ್ರಶ್ನಿಸಿದರು. ಮಾಧ್ಯಮ ಸಂಚಾಲಕ ಸಂಗಣ್ಣ ಇಜೇರಿ ಸುದ್ದಿಗೋಷ್ಠಿಯಲ್ಲಿದ್ದರು.

ಶಿಕ್ಷಕರಿಗೆ ನೋಟಿಸ್ ಶಹಾಪುರ ಕಿಡಿ: ಫಲಿತಾಂಶ ಕುಸಿದಿದೆ ಎಂಬ ಕಾರಣಕ್ಕೆ ಯಾದಗಿರಿ ಜಿಲ್ಲೆ ಎಲ್ಲ ಶಾಲೆ ಶಿಕ್ಷಕರಿಗೆ ನೋಟಿಸ್ ನೀಡಿದ್ದನ್ನು ಖಂಡಿಸಿದ ಮೇಲ್ಮನೆ ಬಿಜೆಪಿ ಸದಸ್ಯ ಅರುಣ ಶಹಾಪುರ, ಅಧಿಕಾರಿಗಳು ಹಾಗೂ ಸರ್ಕಾರ ತಮ್ಮ ಹೊಣೆಯಿಂದ ನುಣುಚಿಕೊಳ್ಳುವ ತಂತ್ರ ಇದಾಗಿದೆ ಎಂದು ಹರಿಹಾಯ್ದರು. ಫಲಿತಾಂಶ ಕಡಿಮೆ ಬಂದಿರುವುದರಲ್ಲಿ ಸಿಇಒ, ಡಿಡಿಪಿಐ ಇತರ ಅಧಿಕಾರಿಗಳ ಹೊಣೆ ಏನೂ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಶಾಲಾವಾರು ಫಲಿತಾಂಶ ವಿಶ್ಲೇಷಿಸಿ ಸಾಧನೆ ಮಾಡದ ಶಾಲೆ ಶಿಕ್ಷಕರಿಗೆ ನೋಟೀಸ್ ನೀಡಬಹುದಿತ್ತು. ಆದರೆ ಎಲ್ಲರನ್ನು ಒಂದೇ ತಟ್ಟೆಯಲ್ಲಿಟ್ಟು ತೂಗುತ್ತಿರುವುದರಿಂದ ಉತ್ತಮ ಶಿಕ್ಷಕರಿಗೆ ನೋವಾಗಲಿದೆ ಎಂದರು.

ಲಕ್ವಾ ಹೊಡೆದಂತಿದೆ ಹೊಸ ಸರ್ಕಾರ: ರೈತರ ಸಾಲ ಮನ್ನಾ ವಿಷಯದಲ್ಲಿ ನಾಟಕವಾಡುತ್ತಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸಕರ್ಾರ ಪಾಶ್ರ್ವವಾಯು(ಲಕ್ವಾ) ಪೀಡಿತವಾಗಿದೆ ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಶಶೀಲ್ ನಮೋಶಿ ವಾಗ್ದಾಳಿ ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಈಗ ರಾಗ ಎಳೆಯುತ್ತಿರುವುದನ್ನು ನೋಡಿದರೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು. ಕಲಬುರಗಿ ಜಿಲ್ಲೆಯಲ್ಲಿ 223 ಕೋಟಿ ರೂ. ರೈತರ ಸಾಲ ಮನ್ನಾ ಆಗಲಿದೆ. ಆದರೆ ಮಾಡುತ್ತಿಲ್ಲ. ಯಾವುದೇ ಕುಂಟು ನೆಪ ಹೇಳದೆ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

Back To Top