ಶಾಸಕರ ಮನೆಯಲ್ಲಿ ಕಳ್ಳರ ಕೈಚಳಕ; ನಗದು ಕಳವು ಮಾಡಿ ಪರಾರಿ

ಚಿತ್ರದುರ್ಗ: ನಗರದ ದವಳಗಿರಿ ಬಡಾವಣೆಯಲ್ಲಿರುವ ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ‌.ಗೋಪಾಲಕೃಷ್ಣ ಅವರ ಮನೆ ಬೀಗ ಮುರಿದು ಕಳ್ಳರು ಐದಾರು ಸಾವಿರ ರೂ.ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಇದು ಶಾಸಕರ ಬಾಡಿಗೆ ಮನೆಯಾಗಿದ್ದು, ಅನಿವಾರ್ಯ ಸಂದರ್ಭದಲ್ಲಿ ಅವರು ಇಲ್ಲಿ ವಾಸ್ತವ್ಯ ಹೂಡುತ್ತಾರೆ.

ಮನೆಯ ಬೀರುವಿನಲ್ಲಿದ್ದ ನಗದನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಸಂತೋಷ್, ಕೋಟೆ ಸಿಪಿಐ ಪ್ರಕಾಶ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *