ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕರು ಕುಡಿದು ಹೊಡೆದಾಡಿಕೊಂಡಿದ್ದಾರೆ : ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕರು ಮದ್ಯ ಸೇವನೆ ಮಾಡಿ ಪರಸ್ಪರ ಹೊಡೆದಾಡುಕೊಂಡಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದಾರಮಯ್ಯನವರು ಉತ್ತರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿ, ಶಾಸಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೈ ಶಾಸಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದು ಶಾಸಕರೆಲ್ಲ ತಲೆತಗ್ಗಿಸುವ ಕೆಲಸ. ಪೊಲೀಸರು ಘಟನೆಯ ಸಂಪೂರ್ಣ ವರದಿ ಪಡೆದು, ಕೂಡಲೇ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರೂ ಈ ಬಗ್ಗೆ ವರದಿ ಪಡೆಯಲಿ ಎಂದರು.

ನಾವು ರಾಜ್ಯಪಾಲರನ್ನು ಭೇಟಿಯಾಗುವುದಿಲ್ಲ. ಅವರಿಗೆ ನಾವು ದೂರು ಕೊಡುವುದಿಲ್ಲ. ಘಟನೆಯನ್ನು ಇಡೀ ದೇಶವೇ ನೋಡಿದೆ. ಸ್ಪೀಕರ್​ ಮಧ್ಯಪ್ರವೇಶಿಸಬೇಕು. ನಾಳೆಯಿಂದ ಬರ ಪ್ರವಾಸ ಮಾಡುತ್ತಿದ್ದೇವೆ. ಶಾಸಕರಿಬ್ಬರ ಕಿತ್ತಾಟದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಲಿ ಎಂದು ಹೇಳಿದರು.