ಉಡುಪಿ: ಕೆಮ್ಮಣ್ಣು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಜ್ಜರಬೆಟ್ಟು ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಪೀಡಿತ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಕಡಲ್ಕೊರೆತ ಪ್ರದೇಶದಲ್ಲಿ ಈಗಾಗಲೇ ಹಲವು ತೆಂಗಿನಮರಗಳು ಕೊಚ್ಚಿ ಹೋಗಿವೆ. ಈ ಬಾಗದಲ್ಲಿರುವ ಅನೇಕ ಮನೆಗಳು ಹಾಗೂ ಲಕ್ಷ್ಮೀನಾರಾಯಣ ಭಜನಾ ಮಂದಿರದ ಬಳಿ ಇರುವ ತಡೆಗೋಡೆ ಸಮುದ್ರ ಪಾಲಾಗುವ ಸಂಭವವಿದೆ. ಹೀಗಾಗಿ ತಕ್ಷಣ ತುರ್ತು ಕಾಮಗಾರಿಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
5 ಕೋಟಿ ರೂ. ಅನುದಾನ ನೀಡಿ
ಸ್ಥಳದಿಂದಲೇ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರಿಗೆ ಮೊಬೈಲ್ ಮೂಲಕ ಮಾತನಾಡಿ, ಕಡಲ ಕೊರೆತದಿಂದ ಆಗಿರುವ ಸಮಸ್ಯೆ ತಿಳಿಸಿದರು. ಇಲ್ಲಿನ ಗಂಭೀರತೆಯ ಕುರಿತೂ ಅವರಿಗೆ ಮಾಹಿತಿ ನೀಡಿ, ಕಡಲ್ಕೊರೆತ ತಡೆ ಕಾಮಗಾರಿಗೆ ತಕ್ಷಣ 5 ಕೋಟಿ ರೂ. ಅನುದಾನ ಬಿಡುಗಡೆ ವಾಡಿ ಎಂದು ವಿನಂತಿಸಿದರು. ಬರುವ ಮಂಗಳವಾರ ಕರಾವಳಿ ಜಿಲ್ಲೆಯ ಶಾಸಕರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅನುದಾನ ಬಿಡುಗಡೆಗೆ ಮನವಿ ವಾಡುವುದಾಗಿಯೂ ತಿಳಿಸಿದರು.
ಉಡುಪಿ ತಹಸೀಲ್ದಾರ್ ಗುರುರಾಜ್, ಕೆಮ್ಮಣ್ಣು ಗ್ರಾಪಂ ಅಧ್ಯಕ್ಷೆ ಕುಸುಮಾ ರವೀಂದ್ರ, ಸದಸ್ಯರಾದ ಪುರಂದರ, ಪ್ರಶಾಂತ್, ಪಿಡಿಒ, ಸ್ಥಳೀಯ ಮುಖಂಡರಾದ ಮುತ್ತ, ಬಂದರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.