More

  ರಕ್ಷಣಾ ಇಲಾಖೆ ಜಾಗ ಪರಿಶೀಲಿಸಿದ ಶಾಸಕ ಟೆಂಗಿನಕಾಯಿ

  ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರ್ರಲ್​ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಶ್ವೇಶ್ವರ ನಗರದ ಬಳಿಯ ರಕ್ಷಣಾ ಇಲಾಖೆಯ 17 ಎಕರೆ ವಿಸ್ತೀರ್ಣದ ಜಾಗವನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಪರಿಶೀಲನೆ ನಡೆಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ರಕ್ಷಣಾ ಇಲಾಖೆ 1965 ರಲ್ಲಿ ರೈಫಲ್ ಗ್ರೌಂಡ್ ನಿರ್ಮಾಣ ಮಾಡಲು ಈ ಜಾಗವನ್ನು ಮೀಸಲಿರಿಸಿದೆ. ಸದ್ಯ ಸುತ್ತಮುತ್ತ ವಸತಿ ಸಂಕೀರ್ಣಗಳು ಬೆಳೆದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ರಕ್ಷಣಾ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಈ ಸ್ಥಳವನ್ನು ಬಿಟ್ಟುಕೊಡಲು ಮನವಿ ಮಾಡಲಾಗುವುದು ಎಂದರು.

  ಈ ಸ್ಥಳವನ್ನು ಮಹಾನಗರ ಪಾಲಿಕೆಗೆ ಬಿಟ್ಟು ಕೊಡುವುದು, ಇದಕ್ಕೆ ಪರ್ಯುಯವಾಗಿ ಬೇರೆ ಸ್ಥಳವನ್ನು ರಕ್ಷಣಾ ಇಲಾಖೆಗೆ ಒದಗಿಸಲಾಗುವುದು. ಇಲ್ಲವಾದಲ್ಲಿ ಈ ಸ್ಥಳದಲ್ಲಿ ಅತ್ಯುತ್ತಮವಾದ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.

  ಈ ಹಿಂದೆ ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿದರು ಸಹ ಒಳಚರಂಡಿ ವ್ಯವಸ್ಥೆ ಮಾಡಲು ತಡೆ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಭೆ ಕರೆದು, ರ್ಚಚಿಸಲು ಜಿಲ್ಲಾಧಿಕಾರಿ ಅವರಿಗೆ ಶಾಸಕ ಟೆಂಗಿನಕಾಯಿ ಸೂಚಿಸಿದರು.

  ಈ ವಿಷಯವಾಗಿ ದೆಹಲಿ ಹಾಗೂ ಬೆಂಗಳೂರು ಮಟ್ಟದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರೊಂದಿಗೆ ಸಭೆ ನಡೆಸಿ, ಮುಂದಿನ ಕ್ರಮಗಳನ್ನು ಕೈಗೊಳ್ಳಲು ಪ್ರ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಟೆಂಗಿನಕಾಯಿ ಹೇಳಿದರು.

  ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಸೀಮಾ ಸಿದ್ದು ಮೊಗಲಿಶೆಟ್ಟರ, ಜಿಲ್ಲಾಧಿಕಾರಿ ದಿವ್ಯಪ್ರಭು, ಪ್ರಮುಖರಾದ ಸಿದ್ದು ಮೊಗಲಿಶೆಟ್ಟ್ಟ, ರವಿ ನಾಯಕ್, ರಘು ಧಾರವಾಡಕರ, ಆನಂದ ಪಾಟೀಲ, ಚೇತನ ಕಲಾಲ ಹಾಗೂ ಇತರರು ಉಪಸ್ಥಿತರಿದ್ದರು.

  See also  ವಿಷ ಜಂತುಗಳು ಅವಾಸ ಸ್ಥಾನವಾದ ಖಾಲಿ ನಿವೇಶನಗಳು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts