ಸರ್ಕಾರಿ ದಾಖಲೆ ತಿದ್ದಿದ ಜೀವರಾಜ್ ಗಡಿಪಾರು ಮಾಡಿ

ಎನ್.ಆರ್.ಪುರ: ಬಡವರ ಸರ್ಕಾರಿ ದಾಖಲೆಗಳನ್ನು ತಿದ್ದಿ, ತನ್ನ ಹಿಂಬಾಲಕರಿಗೆ ಜಮೀನು ಮಾಡಿಕೊಟ್ಟ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರನ್ನು ಗಡಿಪಾರು ಮಾಡಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಪಾಕಿಸ್ತಾನದಲ್ಲಿ ಹಿಂದು ದೇವಸ್ಥಾನ ಜೀಣೋದ್ಧಾರ ಕುರಿತ ವಿಚಾರದಲ್ಲಿ ಅಲ್ಲಿನ ಪ್ರಧಾನಿ ಅವರನ್ನು ಸಜ್ಜನರು ಎಂದಿದ್ದ ನನ್ನನ್ನು ಗಡಿಪಾರು ಮಾಡಲು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ಅಲ್ಪಸಂಖ್ಯಾತರ ಮತಗಳಿಕೆಗಾಗಿ ಈ ರೀತಿಯ ಹೇಳಿಕೆ ನೀಡಿ ಬಿಜೆಪಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ಡಿ.ಎನ್.ಜೀವರಾಜ್ ಅವರಂತೆ ನಾನು ಲೋಕಾಯುಕ್ತ ತನಿಖೆ ಎದುರಿಸುತ್ತಿಲ್ಲ ಹಾಗೂ ಪ್ರಕರಣಗಳ ಆರೋಪಿಯೂ ನಾನಲ್ಲ. ವಿನಾಕಾರಣ ನನ್ನನ್ನು ಕೆಣುಕುವುದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿಗೆ ಪೂರಕ ಸಲಹೆ ನೀಡಲಿ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಸೈನಿಕರ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ ಎಂದರು.

ಜಿಪಂ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಕ್ಷೇತ್ರದಲ್ಲಿ ಡಿ.ಬಿ.ಚಂದ್ರೇಗೌಡರು 2 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದರು. 15 ವರ್ಷಗಳ ಸá-ದೀರ್ಘ ಆಡಳಿತ ನೀಡಿದ ಡಿ.ಎನ್.ಜೀವರಾಜ್​ಗೆ ಒಂದೂ ಮನೆ ಮಂಜೂರು ಮಾಡಿಸಲು ಸಾಧ್ಯವಾಗಿಲ್ಲ. ಹಿಂದುಗಳ ಹೆಸರನ್ನು ಹೇಳುವ ಬಿಜೆಪಿ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿಲ್ಲ ಎಂದರು.

50 ಕೋಟಿ ರೂ. ಸತ್ಯ ಬಹಿರಂಗಪಡಿಸುವೆ: ಆಪರೇಷನ್ ಕಮಲದಲ್ಲಿ ನನಗೆ 50 ಕೋಟಿ ರೂ. ಆಮಿಷವೊಡ್ಡಿದ್ದವರು ಯಾರು ಎಂಬುದನ್ನು ಬಹಿರಂಗಪಡಿಸುವಂತೆ ಮಾಜಿ ಶಾಸಕ ಡಿ.ಎನ್.ಜೀವರಾಜ್ ಹಾಕಿರುವ ಸವಾಲಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಸಣ್ಣಕರೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಮತಯಾಚಿಸುವಾಗ ಮಾತನಾಡಿ, ಕಾಂಗ್ರೆಸ್​ನಲ್ಲಿ ಪಕ್ಷಕ್ಕಾಗಿ ಹಗಲು ರಾತ್ರಿ ಶ್ರಮಿಸಿದ ಡಾ. ಅಂಶುಮಂತ್ ಅವರಂತಹ ನಾಯಕರಿದ್ದರೂ ರಾಜೇಗೌಡರು ಆಪರೇಷನ್ ಕಮಲದ ನೆಪದಲ್ಲಿ ಹೈಕಮಾಂಡನ್ನು ಬ್ಲ್ಯಾಕ್​ವೆುೕಲ್ ಮಾಡಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆರೋಪಿಸಿದ್ದಾರೆ. ನನಗೆ ಆಮಿಷವೊಡ್ಡಿದವರ ಯಾರೆಂದು ಮುಂದೆ ಬಹಿರಂಗ ಪಡಿಸುತ್ತೇನೆ ಎಂದರು