ಸುಂದರ್ ಗೌಡರನ್ನು ವಿವಾಹವಾದ ಲಕ್ಷ್ಮೀ ನಾಯ್ಕ್​ ಹೇಳಿದ್ದೇನು ಗೊತ್ತಾ?

<<ಸೆಲ್ಫೀ ವಿಡಿಯೋ ಮೂಲಕ ವಿವಾಹದ ಕುರಿತು ಸ್ಪಷ್ಟನೆ ನೀಡಿದ ಲಕ್ಮೀ ನಾಯ್ಕ್​>>

ಬೆಂಗಳೂರು: ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್‌ ಅವರ ಪುತ್ರಿ ಲಕ್ಷ್ಮೀ ನಾಯ್ಕ್​, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್​ ಗೌಡ ಅವರನ್ನು ಸ್ವ-ಇಚ್ಛೆಯಿಂದ ಮದುವೆಯಾಗಿರುವುದಾಗಿ ಸೆಲ್ಫೀ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅವರಿಬ್ಬರ ಮದುವೆ ಚಿತ್ರ ಹೊರಬೀಳುತ್ತಿದ್ದಂತೆಯೇ ನವದಂಪತಿ ಸುಂದರ್​ಗೌಡ ಹಾಗೂ ಲಕ್ಮೀ ಇಬ್ಬರೂ ಸೇರಿ ಚಿತ್ರೀಕರಿಸಿರುವ ಸೆಲ್ಫೀ ವಿಡಿಯೋದಲ್ಲಿ ತಮ್ಮ ಮದುವೆ ಕುರಿತು ಲಕ್ಮೀ ಮಾತನಾಡಿದ್ದಾರೆ.

‘ನಾನು ಸುಂದರ್​ ಗೌಡ್ರು ಇಬ್ರೂ ಇಷ್ಟ ಪಟ್ಟು, ಇಚ್ಛೆಯಿಂದ ಮದ್ವೆ ಆಗಿರುವಂಥದ್ದು. ನಮ್ಮಿಂದ ಯಾರಿಗೂ ಏನೂ ತೊಂದರೆ ಆಗ್ಬಾರ್ದು, ಹಾನಿ ಆಗ್ಬಾರ್ದು. ನಾನು ಮನಸಾರೆ ಅವರನ್ನು ಮದುವೆ ಆಗಿದ್ದೇನೆ. ಇದಕ್ಕೆ ನಂಗೆ ಯಾವುದೇ ಅಭ್ಯಂತರ ಇಲ್ಲ, ಯಾರೂ ಫೋರ್ಸ್​ ಮಾಡಿಲ್ಲ. ನಾನು ಮೈನರ್​ ಅಲ್ಲ ಮೇಜರ್​. ನನ್ನ ಬುದ್ಧಿ ಸ್ವತಃ ನಾನು ಯೋಚನೆ ಮಾಡಬಹುದು. ಐ ಆ್ಯಮ್​ ಹ್ಯಾಪಿ ಟು ಲಿವ್​ ವಿಥ್​ ಹಿಮ್​‘ ಎಂದಿದ್ದಾರೆ.

ಬುಧವಾರ ಲಕ್ಷ್ಮೀ ನಾಪತ್ತೆಯಾಗಿರುವ ಕುರಿತು ಶಾಸಕ ಶಿವಮೂರ್ತಿ ನಾಯ್ಕ್​ ಯಲಹಂಕ ನ್ಯೂಟೌನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Leave a Reply

Your email address will not be published. Required fields are marked *