ಸಾಮೂಹಿಕ ವಿವಾಹ ಸಮಾಜಕ್ಕೆ ಮಾದರಿ

ಕಕ್ಕೇರಾ: ವಧು-ವರರ ಕುಟುಂಬಗಳ ಮನವೊಲಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಸಕ ನರಸಿಂಹನಾಯಕ ಹೇಳಿದರು.

ಬಸವ ಜಯಂತಿ ನಿಮಿತ್ತ ಭಾನುವಾರ ಪಟ್ಟಣದ ಸೌರಾಷ್ಟ್ರ ಅಧಿಪತಿ ಶ್ರೀ ಸೋಮನಾಥ ದೇವಾಲಯದಲ್ಲಿ ಪೂಜ್ಯ ನಂದಣ್ಣಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ 46 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸತತ ನಾಲ್ಕು ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯ ನಡೆಸಿಕೊಂಡು ಬರುತ್ತಿರುವ ಶ್ರೀ ನಂದಣ್ಣಪ್ಪ ಪೂಜಾರಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಯುವ ಮುಖಂಡ ಹನುಮಂತನಾಯಕ ಜಹಾಗೀರದಾರ ಮಾತನಾಡಿ, ಸರಳ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಆಥರ್ಿಕ ಹೊರೆ ತಪ್ಪಿಸುವ ಜತೆಗೆ ಸಮಾಜದಲ್ಲಿ ಸಮಾನತೆ ಸಾರಬಹುದು. ಶ್ರೀ ನಂದಣ್ಣಪ್ಪ ಪೂಜಾರಿ ಅವರು ಸಾಮೂಹಿಕ ವಿವಾಹ ಮಾಡುವ ಮೂಲಕ ಬಡಜನರ ಪಾಲಿಗೆ ಅಶಾ ಕಿರಣರಾಗಿದ್ದಾರೆ ಎಂದರು.

ಯಲಗಟ್ಟಿ ಶ್ರೀ ಮಹಾಂತಯ್ಯ ಸ್ವಾಮೀಜಿ ನವ ವಧುವರರಿಗೆ ಮಂತ್ರೋಪದೇಶ ನೀಡಿದರು. ಪರಮಣ್ಣ ಮುತ್ಯಾ ಬಂಡೆಪ್ಪನಹಳ್ಳಿ, ಮಾರ್ತಂಡಪ್ಪ ಪೂಜಾರಿ, ದೇವಿಂದ್ರಪ್ಪ ಪೂಜಾರಿ ವಾಗನಗೇರಾ, ಬೈಲಕುಂಟಿ ಶ್ರೀಗಳು, ಎಪಿಎಂಸಿ ಸದಸ್ಯ ಬಸವರಾಜ ಆರೇಶಂಕರ, ಪರಮಣ್ಣ ಪೂಜಾರಿ, ಪರಮಣ್ಣ ತೇರಿನ್, ಸೋಮನಾಥ ಸೊಲ್ಲಾಪುರ, ನಿಂಗಯ್ಯ ಬೂದಗುಂಪಿ, ಭೀಮನಗೌಡ ಹಳ್ಳಿ, ಪವಾಡೆಪ್ಪ ಮ್ಯಾಗೇರಿ ಇತರರಿದ್ದರು.

ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ, ವಲಯ ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀಬಾಯಿ ಚವ್ಹಾಣ್, ಅಂಗನವಾಡಿ ಕಾರ್ಯಕತರ್ೆಯ ರಂಗಮ್ಮ ಮೇಲಾ, ಅಕ್ಕಮಹಾದೇವಿ ಅಸ್ಕಿ, ವಿಜಯಲಕ್ಷ್ಮೀ ಜುಮ್ಮಾರ್, ಶಶಿಕಲಾ ವಿಶೇಷ ಜಾಗೃತಿ ವಹಿಸಿದ್ದರು.

ಕಾರ್ಯಕ್ರಮಕ್ಕೆ ಬಂದ ಜನರಿಗೆ ಯಾವುದೇ ತೊಂದರೆಯಾಗದಂತೆ ರಾಜು ಹವಾಲ್ದಾರ್, ಚಿದಾನಂದ ಕಮತಗಿ, ಶ್ಯಾಮಸುಂದರಶೆಟ್ಟಿ, ಮಲ್ಲಣ್ಣ ಜಂಪಾ ಸೇರಿ ಅನೇಕರು ಶ್ರಮಿಸಿದರು. ಪಿಎಸ್ಐ ಪ್ರದೀಪ ಬಿಸೆ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

===========
((ಕೋಟ್…..))
ನವ ದಾಂಪತ್ಯಕ್ಕೆ ಕಾಲಿಡುತ್ತಿರುವ ದಂಪತಿಗಳು ಪರಸ್ಪರ ಒಬ್ಬರಿಗೊಬ್ಬರು ಅರಿತು ಜೀವನ ಸಾಗಿಸಬೇಕು. ಅಲ್ಲದೇ ಸತಿ-ಪತಿಗಳು ಒಂದೇ ರಥದ ಚಕ್ರದಂತಿದ್ದು, ಗುರು-ಹಿರಿಯರ ವಿಶ್ವಾಸ ಮತ್ತು ಮಾರ್ಗದರ್ಶನದಿಂದ ಜೀವನ ನಡೆಸಬೇಕು.
| ನರಸಿಂಹ ನಾಯಕ
ಶಾಸಕರು, ಸುರಪುರ

  • ಪೂಜ್ಯ ಶ್ರೀ ನಂದಣ್ಣ ಪೂಜಾರಿ ನೇತೃತ್ವದಲ್ಲಿ ಉಚಿತ ಸಾಮೂಹಿಕ ವಿವಾಹ
  • ಬಂದ ಭಕ್ತರಿಗೆ ಬುಂದೆ, ಬದನೆಕಾಯಿ ಪಲ್ಯ, ಕಡಕ್ ರೊಟ್ಟಿ, ಅನ್ನಸಾರು ಊಟ

Leave a Reply

Your email address will not be published. Required fields are marked *