90 ಶಾಸಕರು ಹೊಸದಾಗಿ ಆಯ್ಕೆಯಾಗಿದ್ದೇವೆ, ನಾವೆಲ್ಲಾ ಸೇರಿ ಪಕ್ಷಾತೀತವಾಗಿ ಸರ್ಕಾರ ರಚಿಸೋಣ: ಶಾಸಕ ಎನ್. ಮಹೇಶ್​​ ಕರೆ

ಚಾಮರಾಜನಗರ: ನಾನಂತೂ ಮಧ್ಯಂತರ ಚುನಾವಣೆಗೆ ತಯಾರಿಲ್ಲ. ಚುನಾವಣೆ ನಡೆಸುವ ಕಷ್ಟ, ಖರ್ಚುವೆಚ್ಚಗಳ ಕುರಿತು ಮೊದಲ ಬಾರಿಗೆ ಆಯ್ಕೆಯಾದ ನಮ್ಮಂತವರಿಗೆ ಮಾತ್ರ ಗೊತ್ತು. ಈ ಬಾರಿ 90 ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದೇವೆ. ನಾವೆಲ್ಲಾ ಸೇರಿ ಪಕ್ಷಾತೀತವಾಗಿ ಸರ್ಕಾರ ರಚಿಸೋಣ ಎಂದು ಕೊಳ್ಳೇಗಾಲ ಕ್ಷೇತ್ರ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಸಲಹೆ ನೀಡಿದ್ದಾರೆ.

ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಅವರು ಮೈತ್ರಿ ಸರ್ಕಾರಕ್ಕೆ ನನ್ನ ಬೆಂಬಲ‌ ಮುಂದುವರೆಯುತ್ತದೆ. ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯಾದರೆ ನಮ್ಮ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಮೈತ್ರಿ ಸರ್ಕಾರದಲ್ಲಿ ನನ್ನ ಕ್ಷೇತ್ರಕ್ಕೆ ನೀರಿಕ್ಷಿಸಿದಷ್ಟು ಅನುದಾನ ಕೊಟ್ಟಿಲ್ಲ. ಇದೇ ಕಾರಣವನ್ನಿಟ್ಟುಕೊಂಡು ಕೆಲ ಶಾಸಕರು ಬಂಡಾಯವೆದಿದ್ದಾರೆ. ಕಾಂಗ್ರೆಸ್ ಬಂಡಾಯ ಶಾಸಕರೆಲ್ಲರೂ ಮಾಜಿ ಸಿಎಂ ಸಿದ್ದರಾಮಯ್ಯನವರ ಅನುಯಾಯಿಗಳು. ಇದಕ್ಕೆ ಸಿದ್ದರಾಮಯ್ಯನವರು ಉತ್ತರ ಕೊಡಬೇಕಾಗುತ್ತದೆ ಎಂದು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *