ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮನೆ ಬಳಿ ನಿಗೂಢ ಸ್ಫೋಟ, ಪಾದಚಾರಿ ಸಾವು

ಬೆಂಗಳೂರು: ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ವೈಯಾಲಿಕಾವಲ್‌ ಮನೆ ರಸ್ತೆಯಲ್ಲಿ ಸ್ಫೋಟ ಸಂಭವಿಸಿದ್ದು, ಓರ್ವ ಪಾದಚಾರಿ ಮೃತಪಟ್ಟಿದ್ದಾನೆ.

ಸ್ಫೋಟದ ರಭಸಕ್ಕೆ ಮೃತನ ಕೈಗಳು ಮತ್ತು ತಲೆ ಛಿದ್ರವಾಗಿದೆ. 11ನೇ ಬಿ ಕ್ರಾಸ್ ವೈಯಾಲಿಕಾವಲ್‌ನ ಶಾಸಕ ಮುನಿರತ್ನ ನಿವಾಸದ ಬಳಿಯಿರುವ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದುರಂತ ಸಂಭವಿಸಿದೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್​ ಪ್ರತಿಕ್ರಿಯಿಸಿ, ಇಂದು ಬೆಳಗ್ಗೆ ಸುಮಾರು 9.15ಕ್ಕೆ ಸ್ಫೋಟ ಸಂಭವಿಸಿದೆ. ವೈಯಾಲಿಕಾವಲ್​ನ ರಸ್ತೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದು ಯಾವ ಕಾರಣಕ್ಕೆ ಆಗಿದೆ ಎಂದು ಪರಿಶೀಲಿಸುತ್ತೇವೆ. ಪರಿಶೀಲನೆಗಾಗಿ ಎಫ್​ಎಸ್​ಎಲ್​ ತಂಡ ಬರುತ್ತಿದೆ. ದೋಬಿ ಕೆಲಸ ಮಾಡುತ್ತಿದ್ದ ವೆಂಕಟೇಶ್​​ ಇಲ್ಲಿ ನಡೆದುಕೊಂಡು ಬರುವಾಗ ಸ್ಫೋಟ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *