ಮಾಡಾಳ್ ವಿರೂಪಾಕ್ಷಪ್ಪ ಬಂಧನ; ಕಾರಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ಬಂಧಿಸಿದ ಪೊಲೀಸರು

ತುಮಕೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಕೊನೆಗೂ ಬಂಧಿಸಲ್ಪಿಟ್ಟಿದ್ದಾರೆ. ಬಂಧನದ ಭೀತಿಯಿಂದ ಕಾರಿನಲ್ಲಿ ಬೇರೆಡೆಗೆ ತೆರಳುತ್ತಿದ್ದ ಅವರನ್ನು ಮಾರ್ಗಮಧ್ಯೆ ಅಡ್ಡಗಟ್ಟಿ ಅರೆಸ್ಟ್​ ಮಾಡಲಾಗಿದೆ. ತುಮಕೂರಿನ ಕ್ಯಾತಸಂದ್ರ ಟೋಲ್ ಗೇಟ್​ ಬಳಿ ಲೋಕಾಯುಕ್ತ ಪೊಲೀಸರು ಮಾಡಾಳ್ ವಿರೂಪಾಕ್ಷಪ್ಪರನ್ನು ಬಂಧಿಸಿದ್ದು, ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಶಾಸಕ ಮಾಡಾಳ್ ಚಿತ್ರದುರ್ಗದಿಂದ ಬೆಂಗಳೂರಿನತ್ತ ಕೆಎ 17 ಝಡ್ 7929 ನಂಬರಿನ ಬಿಳಿ ಇನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಅಂದು ‘ಎಲ್ಲೂ ಹೋಗಿಲ್ಲ, ಮನೆಯಲ್ಲೇ ಇದ್ದೆ’ … Continue reading ಮಾಡಾಳ್ ವಿರೂಪಾಕ್ಷಪ್ಪ ಬಂಧನ; ಕಾರಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ಬಂಧಿಸಿದ ಪೊಲೀಸರು