More

  ಯತ್ನಾಳ್ ಅಖಂಡ ವಿಜಯಪುರ ಜಿಲ್ಲೆಯ ಗೊಡ್ಡೆಮ್ಮೆ! ಅದು ಹಿಂಡುವುದೇ ಇಲ್ಲ: ಶಾಸಕ ಕಾಶಪ್ಪನವರ್ ಲೇವಡಿ

  ಬಾಗಲಕೋಟೆ: ಇಂದು ಬಾಗಲಕೋಟೆ ಲೋಕಸಭಾ ಕಾಂಗ್ರೆಸ್​ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಪರ ಬಿರುಸಿನ ಪ್ರಚಾರದಲ್ಲಿ ಭಾಗಿಯಾದ ವೀಣಾ ಕಾಶಪ್ಪನವರ್ ಪತಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್​, ಪ್ರಚಾರದ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿ, ಜನರು ಎದುರು ಲೇವಡಿ ಮಾಡಿದ್ದಾರೆ.

  ಇದನ್ನೂ ಓದಿ: ಮತದಾನ ಸಮೀಪಿಸುತ್ತಿರುವುದರಿಂದ ಕಾರ್ಯಪ್ರೌವೃತ್ತರಾಗಿ ಆಮಿಷ ತಡೆಯಿರಿ: ರಾಜ್ಯದ ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿಕುಮಾರ ಸೂಚನೆ

  ಶಾಸಕ ಯತ್ನಾಳ್ ಅಖಂಡ ವಿಜಯಪುರ ಜಿಲ್ಲೆಯ ಗೊಡ್ಡೆಮ್ಮೆ. ಅದು ಹಿಂಡುವುದೇ ಇಲ್ಲ. ಅವಾ ಎಲ್ಲಾ ಜಾತಿಗೂ ಬೈತಾನ, ಯಾರಿಗೂ ಬಿಟ್ಟಿಲ್ಲ. ಬಹಳ ದಿನದಿಂದ ಎಮ್ಮಿಕರ ಒದರಾಕ ಹತ್ತೈತಿ, ಪಂಚಮಸಾಲಿಗೆ ನೀ ಒಬ್ಬನಾ ಹುಟ್ಟಿಲ್ಲ ಎಂಬುದು ಗಮನದಲ್ಲಿರಲಿ. ನಿನ್ನ ಬಾಯಿ ಮುಚ್ಚಿಕೊಂಡು ಇದ್ದರೆ, ಒಳಿತು. ಇಲ್ಲದಿದ್ದರೆ ಈಶ್ವರಪ್ಪಗೆ ಬಂದ ಗತಿಯೇ ನಿನಿಗೂ ಬರ್ತೈತಿ ಎಂದು ಎಚ್ಚರಿಕೆ ಕೊಟ್ಟರು.

  ಈ ದೇಶ, ಜಾತಿ ಇವರಪ್ಪನ ಮನೆಯದಾ? ಹೋದಲ್ಲೆಲ್ಲ ಅಲ್ಪಸಂಖ್ಯಾತರನ್ನ ಬೈಯೋಕೆ? ಇವನು ಈ ಹಿಂದೆ ಎಲ್ಲಿದ್ದ ಅಂತ ಈ ಎರಡು ಜಿಲ್ಲೆಗೆ ಗೊತ್ತಿಲ್ಲವೇನು, ಬಾಯಿಗೆ ಲಗಾಮ್ ಹಾಕಿಕೊಂಡರೆ ಒಳಿತು. ಇಲ್ಲ ಎಂದರೆ ಎಮ್ಮಿಕರದಂಗ ಒದರಿ..ಒದರಿ ಸಾಯೋ ಪರಿಸ್ಥಿತಿ ಬರುತ್ತದೆ ಎಂದರು.

  “ಹಾರ್ದಿಕ್ ನಾಯಕತ್ವ ಹೀಗೆ ಮುಂದುವರಿದರೆ…” ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಭವಿಷ್ಯ ನುಡಿದ ಮನೋಜ್ ತಿವಾರಿ!

  4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts