ಬಳ್ಳಾರಿ: ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರನ್ನು ನಗರದ ಹೊರವಲಯದಲ್ಲಿ ಸೋಮವಾರ ಪೊಲೀಸರು ವಶಕ್ಕೆ ಪಡೆದರು. ಮುಸ್ಲಿಂ ಸಮುದಾಯ ಗುರಿಯಾಗಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ನಗರ ಶಾಸಕ ಸೋಮಶೇಖರ ರೆಡ್ಡಿ ಮನೆ ಮುಂದೆ ಪ್ರತಿಭಟಿಸುವುದಕ್ಕೆ ತೆರಳುತ್ತಿದ್ದ ಹಿನ್ನೆಲೆ ತಡೆದ ಪೊಲೀಸರು ಶಾಸಕ ಜಮೀರ್ ಸೇರಿ ಇನ್ನೀತರೆ ಮುಖಂಡರನ್ನು ವಾಹನದಲ್ಲಿ ಕುಡತನಿ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು.
ಮುಂಜಾಗ್ರತಾ ಕ್ರಮವಾಗಿ ಶಾಸಕ ಸೋಮಶೇಖರ್ ರೆಡ್ಡಿ ಮನೆಗೆ ಬೀಗಿ ಭದ್ರತೆ ಕೈಗೊಳ್ಳಲಾಗಿತ್ತು. ಸ್ಥಳೀಯ ಪೊಲೀಸರು ಸೇರಿ ಒಂದು KSRP ತುಕಡಿ ನಿಯೋಜನೆ ಮಾಡಲಾಗಿತ್ತು. ಇದಲ್ಲದೆ ಬಿಐಟಿಎಮ್ ಕಾಲೇಜು, ಸುಧಾ ಕ್ರಾಸ್ ಬಳಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.ಜಮ್ಮೀರ್ ಅಹಮದ್ ಬಳ್ಳಾರಿಗೆ ಬರೋದನ್ನ ಬಿಜೆಪಿ ನಾಯಕರು ಸೇರಿ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಜಮೀರ್ ಜತೆಗೆ ಪ್ರತಿಭಟನೆ ನಡೆಸಲು ಮುಸ್ಲಿಮ್ ಸಮುದಾಯದ ನೂರಾರು ಯುವಕರು ಸಿದ್ಧರಾಗಿ ಬಂದಿದ್ದರು.ಹೀಗಾಗಿ ಪೊಲೀಸರು ಜಮೀರ್ ಸೇರಿ ಇನ್ನೀತರರನ್ನು ಅರ್ಧದಲ್ಲೆ ತಡೆದು ಬಂಧಿಸಿ ಕರೆದೊಯ್ದರು. ಕಾಂಗ್ರೆಸ್ ಮುಖಂಡರಾದ ಹನುಮ ಕಿಶೋರ್, ಕುಡಿತಿನಿ ಶ್ರೀನಿವಾಸ್, ಮುನ್ನಾಭಾಯ್ ಸೇರಿದಂತೆ ಹಲವರು ಇದ್ದರು.
ಶಾಸಕ ಸೋಮಶೇಖರ ರೆಡ್ಡಿ ಮುಸಲ್ಮಾರನ್ನು ಗುರಿಯಾಗಿಸಿಕೊಂಡು ಪ್ರಚೋದನೆ ಮಾಡಿದ್ದರು.ಉಫ್ ಎಂದು ಊದಿದರೆ ಗಾಳಿಗೆ ಹೋಗುತ್ತೀರಿ ಎಂದಿದ್ದರು.ಆದರೆ, ನಾನು ಬಳ್ಳಾರಿಗೆ ಬಂದಿದ್ದೇನೆ.ಎಲ್ಲಿದ್ದಾನೆ ಸೋಮಶೇಖ ರೆಡ್ಡಿ ಕರೀರಿ, ಊದಿದರೆ ನಾನು ಹೋಗುತ್ತೇನೆ ನೋಡೋಣ ಎಂದು ಸವಾಲು ಹಾಕಿದರು. ಅವರನ್ನು ಕೂಡಲೇ ಬಂಧಿಸಿ.
ಜಮೀರ್ ಅಹಮದ್, ಚಾಮರಾಜ ಪೇಟೆ ಶಾಸಕ