ಬಿಜೆಪಿಯಲ್ಲಿ ಜೈಕಾರ ಹಾಕೋರೇ ಬೇರೆ ಜಿಲೇಬಿ ತಿನ್ನೋರೇ ಬೇರೆ

blank

ಕಾರವಾರ:“ಬಿಜೆಪಿಯಲ್ಲಿ ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋನೇ ಬೇರೆ ಜೈಲಿಗೆ ಹೋಗೋನೇ ಬೇರೆ” ಎಂದು ಶಾಸಕ ಶಿವರಾಮ ಹೆಬ್ಬಾರ ಕಿಡಿ ಕಾರಿದ್ದಾರೆ.
ಬಿಜೆಪಿ ವರಿಷ್ಠರಿಂದ ಹೆಬ್ಬಾರ ಸೇರಿ ಇತರ ಶಾಸಕರು, ಮಾಜಿ ಶಾಸಕರಿಗೆ ಬಂದ ನೋಟಿಸ್ ಕುರಿತು ಅವರು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಇದಕ್ಕೆಲ್ಲ ಪ್ರಚೋದನೆ ನೀಡಿದವರು ಕಾರಣ. ಬಿ.ಕೆ.ಹರೀಶ, ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡಿದರು. ರೇಣುಕಾಚಾರ್ಯ ಅವರು ಯಾರನ್ನು ಗೌರವಿಸಬೇಕು ಎಂಬ ಗೊಂದಲದಲ್ಲಿದ್ದರು ಅವರ ಮೇಲೆ ಕ್ರಮವಾಗಿಲ್ಲ. ಇನ್ನೂ ಹಲವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಅಂಥವರ ವಿರುದ್ಧ ನಾನು ಲಿಖಿತವಾಗಿ ಹೈಕಮಾಂಡ್ ಗೆ ದೂರು ನೀಡಿದ್ದೇನೆ. ಆದರೆ, ಏನೂ ಕ್ರಮವಾಗಿಲ್ಲ.
ನಾನು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯನಾಗಿ ಇರದೇ ಇರಬಹುದು. ಅದಕ್ಕೆ ಅದರದ್ದೇ ಆದ ಕಾರಣವಿದೆ. ಆದರೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾಯಕರ ವಿರುದ್ಧ ಮಾತನಾಡಿಲ್ಲ. ಆದರೆ, ನನಗೆ ನೋಟಿಸ್ ನೀಡಲಾಗಿದೆ. ಬಿಜೆಪಿಯಲ್ಲಿ ಜಿಲೇಬಿ ತಿನ್ನುವವರು ತಿನ್ನುತ್ತಲೇ ಇದ್ದಾರೆ. ನಮ್ಮಂಥವರು ಜೈಲಿಗೆ ಹೋಗುತ್ತಿದ್ದೇವೆ.
ನೋಟಿಸ್ ನಲ್ಲಿ ಏನಿದೆ ಎಂದು ನೋಡಿಕೊಂಡು, ನಿಗದಿತ ಅವಧಿಯೊಳಗೆ ಲಿಖಿತವಾಗಿ ಅದಕ್ಕೆ ಉತ್ತರ ನೀಡಲಿದ್ದೇನೆ ಎಂದರು.

Share This Article

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…