ನ್ಯಾಮತಿ: ಶೈಕ್ಷಣಿಕ ಅಭಿವೃದ್ಧಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ಅಂಕದೊಂದಿಗೆ ಡಿಗ್ರಿ ಪಡೆದು ತಂದೆ-ತಾಯಿ, ಕಾಲೇಜು ಮತ್ತು ಊರಿಗೆ ಕೀರ್ತಿ ತರುವಂತೆ ಓದಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡರು ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್ ಘಟಕ 1 ಮತ್ತು 2, ಯುವ ರೆಡ್ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸುಮಾರು 7 ಎಕರೆ ಆವರಣದಲ್ಲಿ ಕೊಠಡಿ, ಗ್ರಂಥಾಲಯ, ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಸೌಲಭ್ಯವಿದೆ. ಜತೆಗೆ ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕ ವರ್ಗವಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉನ್ನತ ಮಟ್ಟದ ಪದವಿ ಗಳಿಸಿ, ಉನ್ನತ ಹುದ್ದೆಗಳಿಗೆ ಹೋಗಬಹುದು ಎಂದರು.
ನ್ಯಾಮತಿ -ಹೊನ್ನಾಳಿ ಪೊಲೀಸರ ತಂಡ ಜಂಟಿಯಾಗಿ ಹಗಲಿರುಳು ಕೆಲಸ ಮಾಡಿ ನ್ಯಾಮತಿ ಎಸ್ಬಿಐ ಬ್ಯಾಂಕ್ನಲ್ಲಿ ನಡೆದಿದ್ದ ದರೋಡೆ ಪ್ರಕರಣ ಭೇದಿಸಿ, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹೊಸಮನೆ ಮಲ್ಲಿಕಾರ್ಜುನ್ ಕುಂಬಾರ, ಎನ್. ಜ್ಯೋತಿ, ಎಂ.ಎಸ್. ಗಿರಿಜಾ, ರಾಘವೇಂದ್ರ, ಚಂದ್ರಪ್ಪ, ಡಾ. ರಾಜಶೇಖರ್, ಶಿವಕುಮಾರ್ ಮಾತನಾಡಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯು ಡಾ.ಟಿ.ಸಿ. ಭಾರತಿ ವಹಿಸಿದ್ದರು. ಇದೇ ವೇಳೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.
ಜನಪದ ಕಲಾವಿದ ಬಿ.ಎಂ. ಜಯಣ್ಣ, ಪೊಲೀಸ್ ಇನ್ಸ್ಸ್ಪೆಕ್ಟರ್ ಎನ್.ಎಸ್. ರವಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ.ಬಿ. ಸೋಮಶೇಖರ್, ಎಸ್.ಆರ್. ನಿತಿನ್, ಎಚ್. ಬುಡ್ಯಪ್ಪ, ಕೆ.ಬಿ. ಯತೀಶ್, ಎನ್.ಜೆ. ಚಂದ್ರಪ್ಪ, ಎನ್.ಜೆ. ಸುರೇಶ್ ಇತರರು ಇದ್ದರು. ಡಾ. ನಾಗರತ್ನ ನಿರೂಪಿಸಿದರು. ಎಂ.ಬಿ. ರೇವಣಸಿದ್ದಪ್ಪ ವಂದಿಸಿದರು.