ಕಾರು ಅಪಘಾತ ಪ್ರಕರಣದ ಬಗ್ಗೆ ಶಾಸಕ ಸಿ.ಟಿ. ರವಿ ಹೇಳಿದ್ದೇನು?

ಬೆಂಗಳೂರು: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಪ್ರತಿಕ್ರಿಯಿಸಿದ್ದು, ನಾನು ಕಾರು ಚಾಲನೆ ಮಾಡುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಬೆಳಗ್ಗೆ ದೂರವಾಣಿ ಕರೆ ಮೂಲಕ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಅವರು ಚೆನ್ನೈಗೆ ಹೋಗುವ ಸಲುವಾಗಿ ಸೋಮವಾರ ರಾತ್ರಿ 11.30ಕ್ಕೆ ಚಿಕ್ಕಮಗಳೂರಿನಿಂದ ಹೊರಟೆ, ಚಾಲಕ ಆಕಾಶ್ ಕಾರು ಚಾಲನೆ ಮಾಡುತ್ತಿದ್ದ, ನಾನು ನಿದ್ರೆಗೆ ಜಾರಿದ್ದೆ, ನನ್ನ ಜತೆ ಗನ್​ಮ್ಯಾನ್ ರಾಜನಾಯ್ಕ್ ಕೂಡ ಇದ್ದರು. ಏರ್​​ಬ್ಯಾಗ್ ಓಪನ್ ಆಗಿ ಗಾಡಿ ನಿಂತಾಗ ನನಗೆ ಎಚ್ಚರವಾಯಿತು ಎಂದು ಹೇಳಿದರು.

ಎದ್ದಾಗ ನನಗೆ ಸ್ವಲ್ಪ ಎದೆನೋವು ಕಾಣಿಸಿಕೊಂಡಿತ್ತು. ಅಲ್ಲದೆ ಮೈ ಕೈಗೆ ತರಚಿದ ಗಾಯಗಳಾಗಿತ್ತು. ತಕ್ಷಣ ಕೆಳಗಿಳಿದು ನೋಡಿದಾಗ, ಇಬ್ಬರು ನಿಧನರಾಗಿದ್ದರು. ಸ್ವತಃ ನಾನೇ ಆಂಬುಲೆನ್ಸ್​​ ಹಾಗೂ ಪೊಲೀಸರಿಗೆ ಕರೆ ಮಾಡಿ ಹೇಳಿದೆ. ಆನಂತರ ಎಲ್ಲರನ್ನೂ ಸ್ಥಳಾಂತರಿಸಿದ ಬಳಿಕ ವಿಕ್ರಂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡೆ ಎಂದು ಪ್ರಕರಣ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಇಬ್ಬರು ದುರ್ಮರಣ
12 ಜನ ಎರಡು ಕಾರುಗಳಲ್ಲಿ ಶೃಂಗೇರಿ, ಹೊರನಾಡು ಸೇರಿ ಹಲವು ಪುಣ್ಯ ಕ್ಷೇತ್ರಗಳ ಪ್ರವಾಸ ಮುಗಿಸಿಕೊಂಡು ಸೋಮವಾರ ತಡರಾತ್ರಿ ವಾಪಸ್​ ಬರುವಾಗ ಕುಣಿಗಲ್​ ತಾಲೂಕು ಆಲಪ್ಪನಗುಡ್ಡೆಯ ಬಳಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವ ವೇಳೆ ಶಾಸಕ ಸಿ.ಟಿ.ರವಿ ಅವರಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

One Reply to “ಕಾರು ಅಪಘಾತ ಪ್ರಕರಣದ ಬಗ್ಗೆ ಶಾಸಕ ಸಿ.ಟಿ. ರವಿ ಹೇಳಿದ್ದೇನು?”

Leave a Reply

Your email address will not be published. Required fields are marked *