ವಿಜಯವಾಣಿ ಸುದ್ದಿಜಾಲ ಯಾದಗಿರಿ
ಯಾದಗಿರಿ ನಗರ ಠಾಣೆಯ ಪಿಎಸ್ ಐ ಪರಶುರಾಮ ಸಾವಿನ ಪ್ರಕರಣದಲ್ಲಿ ಎ-೧ ಆಗಿರುವ ಯಾದಗಿರಿಯ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಬಂಧಿಸುವ ಕಾರ್ಯ ಕೊಂಚ ವಿಳಂಬ ಆಗುವ ಸಾಧ್ಯತೆ ಇದೆ.
ಮೊದಲು ಪ್ರಕರಣ ಇನ್ನೊಬ್ಬ ಆರೋಪಿಯಾಗಿರುವ ಶಾಸಕರ ಪುತ್ರ ಪಂಪನಗೌಡರನ್ನು ಪೊಲೀಸರು ಬಂಧಿಸಲಿದ್ದಾರೆ. ಅದಕ್ಕಾಗಿ ತಯಾರಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಚೀಕರ್ ಅನುಮತಿ ಪಡೆದುಕೊಂಡ ಬಳಿಕ ಶಾಸಕ ಚನ್ನಾರೆಡ್ಡಿ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರನ್ನು ಬಂಧಿಸುವ ಮುನ್ನ ಸಭಾಪತಿಗಳ ಅನುಮತಿ ಪಡೆಯಬೇಕು ಇಲ್ಲವೇ ಗನಮಕ್ಕೆ ತಂದು ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ.