ನರಗುಂದ: ಪಾಲಕರು ಮಕ್ಕಳಿಗೆ ರಾಷ್ಟ್ರಪ್ರೇಮ, ಸ್ವಾಭಿಮಾನದಿಂದ ಜೀವನ ಕಟ್ಟಿಕೊಳ್ಳುವುದರ ಬಗ್ಗೆ ತಿಳಿಸಿಕೊಡಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಲಿಂಗಾಯತ ಪಂಚಮಸಾಲಿ ಸಮಾಜದ ವಿವಿಧೋದ್ದೇಶಗಳ ಸಂಘದಿಂದ ಪಟ್ಟಣದ ಆರೂಢಜ್ಯೋತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಿಂಗಾಯತ ಸಮಾಜದವರು ಪ್ರಕೃತಿ ವಿಕೋಪ, ಬೆಲೆಧಾರಣೆ ಮುಂತಾದ ಸಮಸ್ಯೆಗಳಿಂದ ಇತ್ತೀಚೆಗೆ ಕೃಷಿಯಿಂದಲೇ ದೂರ ಸರಿಯುತ್ತಿರುವುದು ಕಳವಳಕಾರಿ ಸಂಗತಿ. ಸರ್ಕಾರಗಳಿಂದ ಲಿಂಗಾಯತ ಸಮಾಜಕ್ಕೆ ಶೈಕ್ಷಣಿಕ ಮೀಸಲಾತಿ ದೊರೆಯಬೇಕಿದೆ ಎಂದರು.
ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರದಿಂದ ಶೈಕ್ಷಣಿಕ ಮೀಸಲಾತಿ ನೀಡಬೇಕಿದೆ. ಈ ಹೋರಾಟಕ್ಕೆ ಸಮಾಜದ ಪ್ರತಿಯೊಬ್ಬರೂ ನಿರಂತರವಾಗಿ ಕೈ ಜೋಡಿಸಬೇಕು ಎಂದರು.
ಪ್ರಭಾಕರ ಉಳ್ಳಾಗಡ್ಡಿ ಉಪನ್ಯಾಸ ನೀಡಿದರು. ಡಾ. ಸಿ.ಕೆ. ರಾಚನಗೌಡ್ರ, ಎಂ.ಬಿ. ಮೆಣಸಗಿ ಮಾತನಾಡಿದರು. ಗೌರವ ಡಾಕ್ಟರೇಟ್ ಪಡೆದ ಶ್ವೇತಾ ಪಾಟೀಲ, ಪುರಸಭೆ ನೂತನ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಮಹನೀಯರನ್ನು ಸನ್ಮಾನಿಸಲಾಯಿತು. ಎನ್.ಬಿ. ಗಾಡಿ, ಎಸ್.ಡಿ. ಕೊಳ್ಳಿಯವರ, ಡಾ.ಸುರೇಶ ಕಮ್ಮಾರ, ಸುರೇಶ ಹುಡೇದಮನಿ, ಅಪ್ಪನಗೌಡ ನಾಯ್ಕರ್, ಉಮೇಶಗೌಡ ಪಾಟೀಲ, ಪ್ರೊ. ಬಿ.ಸಿ. ಹನುಮಂತಗೌಡ್ರ, ಬಸ್ಸು ಪಾಟೀಲ, ಅಜೀತಗೌಡ ಪಾಟೀಲ, ಸಂಗನಗೌಡ ಹಾಲಗೌಡ್ರ, ಸಂಗಣ್ಣ ಕಂಠಿ, ಎಂ.ಎಸ್. ಪೆಟ್ಲೂರ್, ಎಸ್.ಎನ್. ಬಾಳನಗೌಡ್ರ, ಪ್ರಕಾಶ ಭೂಮಣ್ಣವರ ಇತರರಿದ್ದರು. ಪ್ರಶಾಂತ ಅಳಗವಾಡಿ, ಮಂಜುನಾಥ ಗುಗ್ಗರಿ, ಮಂಜು ಬೇವಿನಮರದ ನಿರ್ವಹಿಸಿದರು.