ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯಕ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಬಳ್ಳಾರಿ: ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮನಾಯ್ಕ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮರಿಯಮ್ಮನಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರ ಎಂಎಸ್‌ಪಿಎಲ್‌ ಕ್ರಾಸ್‌ನ ಫ್ಲೈಓವರ್‌ನಲ್ಲಿ ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿಗೆ ಭೀಮಾನಾಯಕ್ ಪುತ್ರ ಅಶೋಕ್ (21) ಪ್ರಯಾಣಿಸುವಾಗ ಅಪಘಾತ ಸಂಭವಿಸಿದೆ.

ಅಶೋಕ್ ಪ್ರಯಾಣಿಸುತ್ತಿದ್ದ ಆಡಿ ಕಾರು ಎದುರಿಗೆ ಬಂದ ಟಾಟಾ ಏಸ್​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅಶೋಕ್‌ಗೆ ಗಾಯಗಳಾಗಿದ್ದು, ಟಾಟಾ ಏಸ್‌ನಲ್ಲಿದ್ದವರ ಕಾಲಿಗೆ ಗಾಯಗಳಾಗಿವೆ.

ಸ್ಥಳಕ್ಕೆ ಶಾಸಕ ಭೀಮಾನಾಯಕ್ ಹಾಗೂ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *