ಆಸ್ಪತ್ರೆಗೆ ಆಗಮಿಸಿದ ಶಾಸಕ ಆನಂದ್​ಸಿಂಗ್​ ತಂದೆ-ತಾಯಿ

ಬೆಂಗಳೂರು: ರೆಸಾರ್ಟ್​ನಲ್ಲಿ ಹಲ್ಲೆಗೊಳಗಾಗಿರುವ ಶಾಸಕ ಆನಂದ್​ ಸಿಂಗ್​ ಆರೋಗ್ಯ ವಿಚಾರಿಸಲು ಅವರ ತಂದೆ-ತಾಯಿ ಆಸ್ಪತ್ರೆಗೆ ಆಗಮಿಸಿದ್ದಾರೆ.

ತಂದೆ ಪ್ರಥ್ವಿರಾಜ್​ಸಿಂಗ್​ ಹಾಗೂ ತಾಯಿ ಸುಮಿತಾಬಾಯಿ ಹೊಸಪೇಟೆಯಿಂದ ಆಗಮಿಸಿದ್ದು ಈಗಾಗಲೇ ಅಪೋಲೋ ಆಸ್ಪತ್ರೆ ತಲುಪಿದ್ದಾರೆ. ಆನಂದ್​ಸಿಂಗ್​ ಪತ್ನಿ ಹಾಗೂ ಪುತ್ರ ಮುಂಬೈನಲ್ಲಿದ್ದು ಅವರೂ ಕೂಡ ಆಗಮಿಸಲಿದ್ದಾರೆ ಎನ್ನಲಾಗಿದೆ.