ಎಂ.ಕೆ.ಹುಬ್ಬಳ್ಳಿ: ಹನುಮ ದೇವಸ್ಥಾನ ವಾರ್ಷಿಕೋತ್ಸವ

ಎಂ.ಕೆ.ಹುಬ್ಬಳ್ಳಿ: ಪಟ್ಟಣ ಹೊರವಲಯದ ಹಳ್ಳದ ದಡದಲ್ಲಿರುವ ಹನುಮ ದೇವಸ್ಥಾನದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಜರುಗಿತು. ಬೆಳಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಹೊಮ-ಹವನ, ಮಹಾಪ್ರಸಾದ ನಡೆಯಿತು. ಅಪಾರ ಭಕ್ತರು ಆಗಮಿಸಿ ಹನುಮ ದೇವರ ದರ್ಶನ ಪಡೆದರು. ದೇವಸ್ಥಾನದ ಪ್ರಮುಖ ಮಲ್ಲಿಕಾರ್ಜುನ ತಿಗಡಿ ಹಾಗೂ ಅವರ ಕುಟುಂಬಸ್ಥರು, ಪಟ್ಟಣದ ಹಿರಿಯರು, ವಿವಿಧ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.