ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ಕೊಕಟನೂರ: ಕಾಣೆಯಾದ ಮಹಿಳೆಯೋರ್ವಳು ಅಥಣಿ ತಾಲೂಕಿನ ವಿಷ್ಣುವಾಡಿ ಗ್ರಾಮದ ಹೊರವಲಯದ ಬಸವೇಶ್ವರ ಏತ ನೀರಾವರಿ ಕಾಲುವೆ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾಳೆ. ವಿಷ್ಣುವಾಡಿ ಗ್ರಾಮದ ಉಮಾಶ್ರೀ ಅಪ್ಪಾಸಾಬ ಸುರಡೆ (35) ಶವವಾಗಿ ಪತ್ತೆಯಾದ ಮಹಿಳೆ. ಜೂ.6 ರಂದು ಉಮಾಶ್ರೀ ಕಾಣೆಯಾಗಿರುವ ಕುರಿತು ಮೃತಳ ಪತಿ ಅಪ್ಪಾಸಾಬ ಸುರಡೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಾಮಗಾರಿ ನಡೆದ ಸ್ಥಳದ ಅಕ್ಕಪಕ್ಕದ ನಿವಾಸಿಗಳು ಗಬ್ಬು ವಾಸನೆ ಬರುತ್ತಿರುವುದನ್ನು ಕಂಡು ಅಥಣಿ ಪೊಲೀಸರಿಗೆ ತಿಳಿಸಿದಾಗ ಶವ ಪತ್ತೆಯಾಗಿದೆ. ಬಚ್ಚಿಟ್ಟ ರೀತಿಯಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅಥಣಿ ಪೊಲೀಸರು ಮೃತಳ ಪತಿ ಅಪ್ಪಾಸಾಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಅಥಣಿ ಡಿವೈಎಸ್‌ಪಿ ರಾಮಗೊಂಡ ಬಸರಗಿ, ಸಿಪಿಐ ಅಲಿಸಾಬ್, ಪಿಎಸ್‌ಐ ಯು.ಎಸ್.ಅವಟಿ, ಸಿಬ್ಬಂದಿ ಎಂ.ಡಿ ಹಿರೇಮಠ, ಎಂ.ಬಿ.ದೊಡಮನಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *