ಮೇಡಮ್​ ಪ್ರಿಯಾಂಕಾ ವಾದ್ರಾ ಕಾಣೆಯಾಗಿದ್ದಾರೆ!

ರಾಯ್​ಬರೇಲಿ: ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಅವರು ಕಾಣೆಯಾಗಿದ್ದಾರೆ ಎಂಬ ಪೋಸ್ಟರ್​ಗಳು ರಾಯ್​ಬರೇಲಿಯ ಬೀದಿಗಳಲ್ಲಿ ರಾರಾಜಿಸುತ್ತಿವೆ.

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರ ಪರವಾಗಿ ಪ್ರಿಯಾಂಕಾ ಪ್ರಚಾರ ಮಾಡಿದ್ದರು. ಆ ನಂತರ ಪ್ರಿಯಾಂಕಾ ವಾದ್ರಾ ಅವರು ಕಾಣೆಯಾಗಿದ್ದಾರೆ. ರಾಯ್​ಬರೇಲಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಪ್ರಮುಖ ಘಟನೆಗಳು ನಡೆದರೂ, ಆ ಸಂದರ್ಭದಲ್ಲಿ ಅವರು ಇಲ್ಲಿಗೆ ಭೇಟಿ ನೀಡಲಿಲ್ಲ ಎಂದು ಪೋಸ್ಟರ್​ನಲ್ಲಿ ತಿಳಿಸಲಾಗಿದೆ.

ಆದರೆ ಕಾಂಗ್ರೆಸ್​ ಪಕ್ಷ ಇದು ದುಷ್ಕರ್ಮಿಗಳ ತಂಡ ನಡೆಸಿರುವ ಕೃತ್ಯ, ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಹೀಗೆ ಮಾಡಿದ್ದಾರೆ. ಗಾಂಧಿ ಪರಿವಾರ ಇಲ್ಲಿನ ಜನರ ಹೃದಯಗಳಲ್ಲಿ ನೆಲೆಸಿದೆ. ಗಾಂಧಿ ಪರಿವಾರದವರು ಇಲ್ಲಿನ ಜನರ ಕಷ್ಟ ಸುಖಗಳಲ್ಲಿ ಸದಾ ಭಾಗಿಯಾಗಿದ್ದಾರೆ ಎಂದು ತಿಳಿಸಿದೆ. (ಏಜೆನ್ಸೀಸ್​)