ಮನೆ ಸೇರಿದ ತಾಯಿ ಮಕ್ಕಳು

ಬೆಳಗಾವಿ: ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಇಬ್ಬರು ಮಕ್ಕಳ ಸಮೇತ ತೆರಳಿ ನಾಪತ್ತೆಯಾಗಿದ್ದ ಮೊದಗಾ ನಿವಾಸಿ ಅಂಬಿಕಾ ಬಾಲಚಂದ್ರ ಬಡಿಗೇರ ಅವರು ಮತ್ತೆ ಮನೆ ಸೇರಿದ್ದಾರೆ.

ತನ್ನ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿರುವ ಕುರಿತು ಶುಕ್ರವಾರ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿ ನೋಡಿ ಮೊದಗಾ ನಿವಾಸಿ ಅಂಬಿಕಾ ಬಾಲಚಂದ್ರ ಬಡಿಗೇರ ಅವರು ತಮ್ಮ ಮಕ್ಕಳಾದ ಭೂಮಿಕಾ ಬಡಿಗೇರ(5) ಹಾಗೂ ಸಾಯಿರಾಜ ಬಡಿಗೇರ(4) ಅವರೊಂದಿಗೆ ಗಂಡನ ಮನೆ ಸೇರಿದ್ದಾರೆ.

ಪತಿಯೊಂದಿಗಿನ ಮನಸ್ತಾಪದಿಂದಾಗಿ ತಾವು ಬೇಸರಗೊಂಡು ತವರು ಮನೆಗೆ ತೆರಳುತ್ತೇನೆಂದು ಸುಳ್ಳು ಹೇಳಿ ಕೊಲ್ಲಾಪುರಕ್ಕೆ ಹೋಗಿ ಅಲ್ಲಿನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದೆ. ಪತ್ರಿಕೆಗಳಲ್ಲಿ ತಾವು ಕಾಣೆಯಾಗಿರುವ ಸುದ್ದಿ ಬಂದಿದ್ದು, ಕುಟುಂಬಸ್ಥರು ಆತಂಕಗೊಂಡಿದ್ದರು. ಹೀಗಾಗಿ ಮತ್ತೆ ಮನೆಗೆ ಬಂದಿರುವುದಾಗಿ ಅಂಬಿಕಾ ತಿಳಿಸಿದ್ದಾರೆ.