17.8 C
Bengaluru
Wednesday, January 22, 2020

ಮಿಟ್ಜಿ ಎನ್ನುವ ನಾಯಿ ಮರಿ ಮಾಲೀಕನ ಮಡಿಲು ಸೇರಿದ ಘಟನೆ ಜಾಲತಾಣದಲ್ಲಿ ವೈರಲ್​ ಆಗಿದ್ದು ಹೀಗೆ…

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ನವದೆಹಲಿ: ನಾಯಿಗಳು ಏನೇ ಛೇಷ್ಟೆ ಮಾಡಿದರೂ ಕೆಲವರ ಅದನ್ನು ಪ್ರೀತಿಯಿಂದ ಹಚ್ಚಿಕೊಂಡು ಬಿಟ್ಟಿರುತ್ತಾರೆ. ಅದು ಎಷ್ಟು ಎಂದರೆ ಕೆಲ ಹೊತ್ತು ಅದು ಕಾಣದಿದ್ದರೆ ಒದ್ದಾಡುತ್ತಾರೆ. ಅಂತಹುದರಲ್ಲಿ ತಮ್ಮಿಷ್ಟದ ನಾಯಿ ಕಣ್ಣೇದುರೇ ಕಣ್ಮರೆಯಾಯಿತೆಂದರೆ ಅವರ ಪರಿಸ್ಥಿತಿ ಏನಾಗಬೇಡ?

ಇದು ಅಂತಹದ್ದೇ ಒಂದು ಪ್ರಸಂಗ. ಯುನೈಟೆಡ್​ ಕಿಂಗ್​ಡಂನ ವುಡ್​ಫೋರ್ಡ್​ ನಿವಾಸಿ ಅಲನ್​ ವಿಟ್ಟನ್​ ಎಂಬಾತನ ಒಂದು ವರ್ಷದ ನಾಯಿ ಕಾಣೆಯಾಯಿತು.

ಲೈಫ್ ಥೆರಪಿ ಕೋಚ್ ಆಗಿ ಕೆಲಸ ಮಾಡುವ ವಿಟ್ಟನ್​ಗೆ ತನ್ನ ನಾಯಿ ಮಿಟ್ಜಿ ಬಗ್ಗೆ ಎಲ್ಲಿಲ್ಲದ ಪ್ರೀತಿ. ನಾಯಿ ಕಳೆದು ಹೋದದ್ದು ಆತನಿಗೆ ಇನ್ನಿಲ್ಲದ ದುಃಖ ತರಿಸಿತ್ತು. ನ.20ರಂದು ಮಾಲೀಕ ವಿಟ್ಟನ್​ ಜತೆ ಮಿಟ್ಜಿ ವಾಯುವಿಹಾರಕ್ಕೆ ಹೋಗಿತ್ತು. ಆಗ ಹಿಂದಿನಿಂದ ಒಂದು ನಾಯಿ ಮಿಟ್ಜಿಯನ್ನು ಬೆನ್ನಟ್ಟಿ ಬಂದಿತ್ತು. ಇದನ್ನು ತಪ್ಪಿಸಿಕೊಳ್ಳಲು ತನ್ನ ಮಾಲೀಕನಿಂದ ದೂರಾದ ಮಿಟ್ಜಿ ಕಣ್ಮರೆಯಾಯಿಯುತು.

ಈ ದುಃಖದಲ್ಲಿದ್ದ ಮಾಲೀಕ ವಿಟ್ಟನ್​, ಸಾಮಾಜಿಕ ಜಾಲ ತಾಣದಲ್ಲಿ ಈ ಸುದ್ದಿ ಪೋಸ್ಟ್​ ಮಾಡಿದ. ಅಲ್ಲಿ ಎಲ್ಲರಿಗೂ ಮಿಟ್ಜಿ ಸಿಕ್ಕಿದರೆ ತಿಳಿಸಿ ಎಂದು ಮವಿ ಮಾಡಿದ. ಜತೆಗೆ ಮಿಟ್ಜಿಯ ಫೋಟೋವನ್ನೂ ಹಾಕಿದ.
ಇದಾದ ಎರಡು ದಿನಗಳ ನಂತರ ರಸ್ತೆ ಬದಿಯ ಒಂದು ರಂಧ್ರದಲ್ಲಿ ಮಿಟ್ಜಿ ಪತ್ತೆಯಾಯಿತು. ಅದನ್ನು ರಕ್ಷಿಸಿ, ಎದೆಗವುಚಿಕೊಂಡು ಕಣ್ಣಿರು ಹಾಕಿದ ವಿಟ್ಟೆನ್​ ಈ ವಿಡಿಯೋವನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿದ. ಈ ವಿಡಿಯೋ ಜಾಲತಾಣದಲ್ಲೀಗ ಎಲ್ಲರ ಮನ ಕಲುಕುವಂತಿದೆ. ಅಲ್ಲಿನ ನಾಗರಿಕರು ಈ ವಿಡಿಯೋ ನೋಡಿ, ಮಿಟ್ಜಿ ಮಾಲೀಕನ ಮಡಿಲು ಸೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋಗೆ ಫೆಸ್​ಬುಕ್​ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿದ್ದರೆ, 856 ಮಂದಿ ಇದನ್ನು ಹಂಚಿಕೊಂಡಿದ್ದಾರೆ.

“ಇದು, ಅದ್ಭುತ ಮಿಟ್ಜಿ ಮನೆ ತಲುಪಿದ್ದು” ಎಂದು ಫೇಸ್​ಬುಕ್​ ಗೆಳಯನೊಬ್ಬ ಬರೆದಿದ್ದರೆ, ಈ ವಿಡಿಯೋ ನನಗೆ ಕಣ್ಣಿರು ತರಿಸಿತು. ಈ ಹೃದಯವಿದ್ರಾವಕ ಕತೆ ಒಳ್ಳೆಯ ಅಂತ್ಯ ಕಂಡಿದೆ. ನೀನು ನಿನ್ನ ಮಿಟ್ಜಿಯೊಂದಿಗೆ ಪರಪೂರ್ಣನಾಗಿದ್ದೀಯ ಎಂದು ಇನ್ನೊಬ್ಬರು ಕಮೆಂಟಿಸಿದ್ದಾರೆ. (ಏಜೆನ್ಸೀಸ್​)

Ever seen a grown man cry?

Alan Whitton ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ನವೆಂಬರ್ 22, 2019

 

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...