More

  ಬಾಗಿವಾಳು ಗ್ರಾಮದ ಯುವಕ ನಾಪತ್ತೆ

  ಹೊಳೆನರಸೀಪುರ: ತಾಲೂಕಿನ ಬಾಗಿವಾಳು ಗ್ರಾಮದ ಚಲುವರಾಯಸ್ವಾಮಿ ಎಂಬುವವರ ಪುತ್ರ ಬಿ.ಸಿ.ಮೋಹನ್‌ಕುಮಾರ್(26) ಕಾಣೆಯಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್ ವಾಹನದ ಚಾಲಕನಾಗಿದ್ದ ಮೋಹನ್‌ಕುಮಾರ್, ಹೊಸಪೇಟೆಗೆ ಹೋಗಿ ವಾಪಸ್ ಬರುವಾಗ ಹಾಸನ-ಬೆಂಗಳೂರು ಹೆದ್ದಾರಿಯ ಮರೊರು ಹ್ಯಾಂಡ್‌ಪೋಸ್ಟ್ ಹತ್ತಿರ ವಾಹನ ಕೆಟ್ಟು ನಿಂತಿದ್ದು, ಮಾಲೀಕರಿಗೆ ಮೊಬೈಲ್‌ನಲ್ಲಿ ಮಾಹಿತಿ ನೀಡಿ, ತಾನೇ ರಿಪೇರಿ ಮಾಡಿಸಿಕೊಂಡು ಬರುತ್ತೇನೆ ಎಂದು ತಿಳಿಸಿದ್ದಾರೆ. ಆದರೆ ಮೋಹನ್‌ಕುಮಾರ ಬಾರದಿದ್ದಾಗ ಸ್ಥಳಕ್ಕೆ ಹೋಗಿ ನೋಡಿದಾಗ ವಾಹನದ ಸಮೀಪ ಚಾಲಕ ಇರಲಿಲ್ಲವೆಂದು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಚಾಲಕನ ತಾಯಿ ಕೆ.ಟಿ.ಶೈಲಜಾ ಪ್ರಕರಣ ದಾಖಲಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts