ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿನ ದಾಖಲೆಗಳಲ್ಲಿ ನಿಜವಾದ ವಕ್ಫ್ ಆಸ್ತಿ ಉಳಿಯಲಿ ಎಂದು ಆದೇಶಿಸಲಾಗಿದ್ದು, ಸಚಿವ ಎಂ.ಬಿ. ಪಾಟೀಲರು ಅದನ್ನು ಬೇರೆಯದ್ದೇ ರೀತಿಯಲ್ಲಿ ವಿವರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.
ವಕ್ಫ್ ಆಸ್ತಿಯನ್ನು ಬಹುತೇಕರು ಸ್ವಂತಕ್ಕೆ ಬಳಸಿಕೊಂಡಿದ್ದು, ಲಾಂತರ ಎಕರೆ ಜಮೀನು ಬೇರೆಯವರು ಲೂಟಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕ್ಫ್ ಆಸ್ತಿ ಲೂಟಿ ತಡೆಯಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ವಿನಾ ಎಲ್ಲಿಯೂ ರೈತರ ಆಸ್ತಿಯನ್ನು ವಶಪಡಿಸಿಕೊಂಡು ಅವರನ್ನು ವಕ್ಕಲೆಬ್ಬಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಸದ್ಯ ಕಾಂಗ್ರೆಸ್ ಸರ್ಕಾರ ರೈತರನ್ನೇ ಟಾರ್ಗೆಟ್ ಮಾಡಿ ಅವರ ಆಸ್ತಿಗಳನ್ನು ದೋಚಲು ಮುಂದಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
ಸದ್ಯ 1 ಲ 20 ಸಾವಿರ ಎಕರೆ ಜಮೀನು ವಕ್ಫ್ ನಮ್ಮದು ಎಂದು ಹೇಳುತ್ತಿದೆ. ಅದು ಹೇಗೆ ಬಂತು? ಕಾಂಗ್ರೆಸ್ ನಾಯಕರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಜಮೀನು, ವಿಧಾನ ಸೌಧವು ನಮ್ಮದೇ ಅಂತೀರಿ, ನೀವು 2013 ರಲ್ಲಿ ವಕ್ಫ್ಗೆ ಅಪರಿಮಿತ ಅವಕಾಶ ಮಾಡಿಕೊಟ್ಟೀದಿರಿ. ಯಾವ ಆಧಾರದ ಮೇಲೆ ರೈತರ ಆಸ್ತಿ ನಮ್ಮದು ಎಂದು ವಕ್ಫ್ ವಾದಿಸುತ್ತಿದೆ ಅದನ್ನು ಎಂ.ಬಿ. ಪಾಟೀಲರೇ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಗೆಜೆಟ್ ರದ್ದುಗೊಳಿಸಿ: ವಿಪ ಮಾಜಿ ಸದಸ್ಯ ಅರುಣ ಶಹಪೂರ ಮಾತನಾಡಿ, ಇಡೀ ಭಾರತದಾದ್ಯಂತ 9 ಲ 60 ಸಾವಿರ ಎಕರೆ ಜಮೀನು ವಕ್ಫ್ಗೆ ಸಂಬಂಧಿಸಿದ್ದು ಎಂದು ಹೇಳುತ್ತಿದ್ದಾರೆ. ವಕ್ಫ್ ಅದಾಲತ್ ಹೆಸರಿನಲ್ಲಿ ಕಾಂಗ್ರೆಸ್ ಪ ರೈತರ ಆಸ್ತಿಯನ್ನು ಲೂಟಿ ಹೊಡೆಯುತ್ತಿದೆ. ಕಾಂಗ್ರೆಸ್ಗೆ ರೈತರ ಬಗ್ಗೆ ನಿಜಯವಾಗಿಯೂ ಅಭಿಮಾನವಿದ್ದರೆ, ಸಚಿವ ಎಂ.ಬಿ.ಪಾಟೀಲರಿಗೆ ರಾಜ್ಯದ ರೈತರ ಬಗ್ಗೆ ಅಭಿಮಾನವಿದ್ದರೆ ಕೂಡಲೇ 1974ರ ವಕ್ಫ್ ಗೆಜೆಟ್ ರದ್ದುಗೊಳಿಸಿ ಎಂದು ಹೇಳಿದರು. ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲರು ನಾನು ವಕ್ಫ್ ಪರವಾಗಿಲ್ಲ ಎಂದು ಹೇಳುವ ಮೂಲಕ ವಕ್ಫ್ ಅನ್ನು ವಿರೋಧಿಸಿದ್ದಾರೆ. ಎಂ.ಬಿ. ಪಾಟೀಲರು ಸಿಎಂ ರೇಸ್ನಲ್ಲಿದ್ದು, ಅವರನ್ನು ಕಟ್ಟಿಹಾಕಲೆಂದೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಚಿವ ಜಮೀರ್ಅಹ್ಮದ್ ಅವರನ್ನು ವಿಜಯಪುರಕ್ಕೆ ಕಳುಹಿಸಿ ವಕ್ಫ್ ಅದಾಲತ್ ನಡೆಸಲು ಸೂಚನೆ ನೀಡಿದ್ದಾರೆ ಎಂದು ಅರುಣ ಶಹಾಪೂರ ಹೊಸ ಬಾಂಬ್ ಸಿಡಿಸಿದರು. ರೈತರ ಆರ್ಟಿಸಿಗೆ ಕೈ ಹಾಕಿದ ಯಾವುದೇ ಸರ್ಕಾರಗಳು ಅಧಿಕಾರದಲ್ಲಿ ಉಳಿದಿಲ್ಲ. ಹಾಗಾಗಿ ಸ್ವತ@ ದೇವರ ಹೆಸರಿನಲ್ಲಿ ಶಿಣ ಸಂಸ್ಥೆ ನಡೆಸುತ್ತಿರುವ ಸಚಿವ ಎಂ.ಬಿ. ಪಾಟೀಲರು ರೈತರು ಹಾಗೂ ಮಠ&ಮಂದಿರಗಳನ್ನು ಉಳಿಸಲು ವಕ್ಫ್ ವಿರುದ್ಧ ಧ್ವನಿ ಎತ್ತಲೇ ಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಹೀಗಾಗಿ, ಅವರು ವಕ್ಫ್ ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.
ಗೊಂದಲದ ಗೂಡಾದ ಕಾಂಗ್ರೆಸ್ : ಇತ್ತೀಚೆಗೆ ವಿಜಯಪುರಕ್ಕೆ ಜೆಪಿಸಿ ಅಧ್ಯ ಜಗದಂಬಿಕಾ ಪಾಲ್ ಭೇಟಿ ನೀಡಿ ಧರಣಿ ನಿರತ ರೈತರ ಅಹವಾಲು ಸ್ವೀಕರಿಸಿದ ದಿನದಿಂದಲೂ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಉಂಟಾಗಿ ಏನು ಮಾತನಾಡಬೇಕು ಎನ್ನುವುದೆ ಗೊತ್ತಾಗುತ್ತಿಲ್ಲ. ಜೆಪಿಸಿ ಅಧ್ಯರು ರೈತರ ಮನವಿ ಪತ್ರಗಳನ್ನು ತೆಗೆದುಕೊಳ್ಳಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸುಖಾಸುಮ್ಮನೆ ಬಿಜೆಪಿ ಆರೋಪ ಮಾಡುವುದನ್ನು ಬಿಟ್ಟು ರೈತರ ಆಸ್ತಿ ಉಳಿಸಲು ಬದ್ಧರಾಗಿ, ಇಲ್ಲವೇ ಬಿಜೆಪಿ ಹೋರಾಟ ಎದುರಿಸಲು ಸಿದ್ಧರಾಗಿ ಎಂದರು. ಸಂಸದ ರಮೇಶ ಜಿಗಜಿಣಗಿ, ಮುಖಂಡ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ವಿಜಯ ಜ್ಯೋಶಿ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.